Feb 24, 2023, 3:45 PM IST
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಎಪಿ ಅರ್ಜುನ್ ಸಾರಥ್ಯದಲ್ಲಿ ಬಂದಿರುವ ಮಾರ್ಟಿನ್ ಭಾರಿ ನಿರೀಕ್ಷೆ ಮೂಡಿಸಿದೆ. ಮಾರ್ಟಿನ್ ಟೀಸರ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಕುತೂಹಲಕ್ಕೆ ತೆರೆಬಿದ್ದಿದೆ. ಧ್ರುವ ಸರ್ಜಾ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಧ್ರುವ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಜಾನಪದ ತಂಡಗಳ ಜೊತೆಗೆ ಚಿತ್ರ ತಂಡದಿಂದ ಅದ್ದೂರಿ ಮೆರವಣಿಗೆ ಜೊತೆಗೆ ಮಾಗಡಿ ರಸ್ತೆಯ ವೀರೇಶ ಚಿತ್ರಮಂದಿರದಲ್ಲಿ ಮಾರ್ಟೀನ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಸಚಿವ ವಿ ಸೋಮಣ್ಣ ಕೂಡ ಸಾಂಕೇತಿಕವಾಗಿ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಕೋರಿದರು.