3 ವರ್ಷದ ಮಾರ್ಟಿನ್ ಶೂಟಿಂಗ್​​ಗೆ ಕುಂಬಳಕಾಯಿ: ವಿಮಾನ ದುರಂತದಿಂದ ಧ್ರುವ ಪಾರಾಗಿದ್ದು ಹೇಗೆ ಗೊತ್ತಾ?

Mar 8, 2024, 12:38 PM IST

ಮಾರ್ಟಿನ್ ಕೇಡಿ ಧ್ರುವ ಸರ್ಜಾಅಭಿನಯದ ಬಹು ನಿರೀಕ್ಷಿತ ಚಿತ್ರ. ಮಾರ್ಟಿನ್ ಶೂಟಿಂಗ್ ಶುರುವಾಗಿ ಹತ್ರತ್ರ ಮೂರು ವರ್ಷಗಳು ಆಗಿತ್ತು. ಆದ್ರು ಮಾರ್ಟಿನ್ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಜೊತೆಗೆ ಇನ್ನು ಶೂಟಿಂಗ್ ಮುಗಿದಿಲ್ವಲ್ಲ ಶಿವ ಅನ್ನುತ್ತಿದ್ರು ಧ್ರುವ ಫ್ಯಾನ್ಸ್. ಭಟ್ ಈಗ ಧ್ರುವ ಮಾರ್ಟಿನ್ ಶೂಟಿಂಗ್ ಅಡ್ಡದಿಂದ ಎದ್ದು ಬಂದಿದ್ದಾರೆ. ತೆರೆ ಮೇಲೆ ಮಾರ್ಟಿನ್ ನೋಡೊಕೆ ರೆಡಿಯಾಗಿ ಅಂತ ಶೂಟಿಂಗ್​​​​ಗೆ ಕುಂಬಳಕಾಯಿ ಒಡೆದಿದ್ದಾರೆ. ಹೌದು. ಅಂತು ಇಂತೂ ಮಾರ್ಟಿನ್ ಚಿತ್ರದ ಶೂಟಿಂಗ್ ಮುಗಿದಿದೆ. ಇನ್ನೇನಿದ್ರು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕ ನೋಡ್ಕೊಂಡ್ ಅದಷ್ಟು ಬೇಗ ಭರ್ಜರಿಯಾಗಿ ಪಂಚ ಭಾಷೆಗಳಲ್ಲಿ ಸಿನಿಮಾ ರಿಲೀಸ್​​ ಮಾಡಬೇಕು ಅಂತ  ನಿರ್ಮಾಪಕರ ಉದಯ್ ಕೆ. ಮೆಹ್ತಾ ರೆಡಿಯಾಗುತ್ತಿದ್ದಾರೆ. 

ನಿರ್ದೇಶನ ಎಪಿ ಅರ್ಜುನ್ ತನ್ನ ಕಲ್ಪನೆಗೆ ತಕ್ಕಂತೆ ಮಾರ್ಟಿನ್ ಚಿತ್ರವನ್ನು 240ದಿನಗಳು ಶೂಟಿಂಗ್ ಮಾಡಿದ್ದಾರೆ  ಚಿತ್ರದ ಶೂಟಿಂಗ್ ಕಂಪ್ಲೀಟ್ ಆಯ್ತು ಅನ್ನೋ ಖುಷಿಯನ್ನ  ಮಾಧ್ಯಮಗಳ ಜೊತೆ ಹಂಚಿ ಕೊಂಡಿದ್ದಾರೆ. ಮೈಸೂರು ರಸ್ತೆಯ ಟೊರಿನೋ ಫ್ಯಾಕ್ಟರಿಯಲ್ಲಿ  ಮಾರ್ಟಿನ್ ಕೊನೆ ದಿನದ ಶೂಟಿಂಗ್ ಮಾಡಿದ್ದಾರೆ. ಭಜರಂಗಿಗೆ ನಮಿಸಿ ಶೂಟಿಂಗ್ ಶುರು ಮಾಡಿದ್ದ ಚಿತ್ರತಂಡ ಭಜರಂಗಿಗೆ ಪೂಜೆ ಸಲ್ಲಿಸುವ ಮೂಲಕ ಮಾರ್ಟಿನ್ ಶೂಟಿಂಗ್​​​​​ಗೆ ಇತಿಶ್ರೀ ಹಾಡಿದ್ದಾರೆ. ಧ್ರುವ ಸರ್ಜಾ ತನ್ನ ತಂಡದ ಜೊತೆ ಮಾರ್ಟಿನ್ ಹಾಡಿನ ಚಿತ್ರೀಕರಣಕ್ಕೆ ಕಾಶ್ಮೀರಕ್ಕೆ ಹಾರಿದ್ರು. ಆಗ ಸಂಭವಿಸ ಬೇಕಿದ್ದ ವಿಮಾನ ದುರಂತದ ಬಗ್ಗೆ ಧ್ರುವ ಮಾತನಾಡಿದ್ದಾರೆ. ಆ ಒಂದು ಕ್ಷಣ ಕಣ್ಮುಂದೆ ಬಂದ ಹೃದಯವಾಸಿಗಳ ಬಗ್ಗೆ ಧ್ರುವ ಹೇಳಿದ್ದಾರೆ. 

ಅಷ್ಟೆ ಅಲ್ಲ ಇತ್ತೀಚೆಗೆ ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿಯೊಬ್ಬಳು ತನ್ನ 4 ವರ್ಷದ ಮಗುವಿನ ಮೇಲೆ ನಿತ್ಯ ಹಲ್ಲೆ ಮಾಡಿದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಬಗ್ಗೆ ಮಾತನಾಡಿದ ಧ್ರುವ ಮಗುವಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಇನ್ನು ಮಾರ್ಟಿನ್ ಚಿತ್ರವನ್ನು  ಅಂದು ಕೊಂಡಂತೆ ತೆರೆ ಮೇಲೆ ಕಟ್ಟಿಕೊಡಲು ನಿರ್ಮಾಪಕ ಉದಯ್ ಕೆ ಮೆಹ್ತಾ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ‌. ಇಡೀ ಚಿತ್ರದಲ್ಲಿ ಕ್ವಾಲಿಟಿ ವಿಚಾರದಲ್ಲಿ ಕಾಂಪ್ರೂ ಆಗದ ಕ್ಲೈಮ್ಯಾಕ್ಸ್ ಗಾಗಿಯೇ 52 ದಿನ ಶ್ರಮ ವಹಿಸಿ ಕೆಲಸ ಮಾಡಿರೋದು ಮಾರ್ಟಿನ್ ಹೈಲೆಟ್​​ನಲ್ಲೊಂದು. ಈ ಸಿನಿಮಾದ ಬಜೆಟ್​ 80 ಕೋಟಿ ಅಂತ ಹೇಳಲಾಗಿದೆ. ಸಧ್ಯ ಶೂಟಿಂಗ್ ಮುಗಿಸಿರೋ ಮಾರ್ಟಿನ್​ ಥಿಯೇಟರ್​​ ಮೇಲೆ ಹಿಟ್ ಆಗೋದಕ್ಕೆ ಡೇಟ್ ಫಿಕ್ಸ್ ಮಾಡೋದಷ್ಟೆ ಬಾಕಿ.