Oct 5, 2024, 10:46 AM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಬ್ಬರಿಸೋಕೆ ಅಖಾಡ ಸಜ್ಜಾಗಿದೆ. ಅದಕ್ಕೆ ಟೈಮ್ ಕೂಡ ಫಿಕ್ಸ್ ಆಗಿದೆ. ಇನ್ನೇನಿದ್ರು ಪ್ರೇಕ್ಷಕ ಆ ಅಖಾಡದಲ್ಲಿ ಧ್ರುವನ ಅಬ್ಬರ ನೋಡೋದೊಂದೇ ಭಾಕಿ. ಅದು ಮಾರ್ಟಿನ್ ಅಖಾಡ. ಹಾಗಾದ್ರೆ 3 ವರ್ಷದಿಂದ ಸಿದ್ಧವಾಗಿರೋ ಮಾರ್ಟಿನ್ನ ಅಖಾಡದ ಹಿಂದಿನ ಶಕ್ತಿ ಯಾರು..? ಅವರ ಶ್ರಮ ಹೇಗಿತ್ತು. ಮಾರ್ಟಿನ್. ಕನ್ನಡಿಗರು ಕಣ್ಣಿಟ್ಟು ಕಾಯುತ್ತಿರೋ ಸಿನಿಮಾ ಕನ್ನಡಿಗರೇ ಬಾಣಸಿಗರಾಗಿ ಸಿದ್ಧಪಡಿಸಿರೋ ಸ್ಯಾಂಡಲ್ವುಡ್ನ ಮತ್ತೊಂದು ಪ್ಯಾನ್ ಇಂಡಿಯಾ ಹಬ್ಬದೂಟ. ಮಾರ್ಟಿನ್ನ ಮೂರು ವರ್ಷದ ಶ್ರಮ ಅಕ್ಟೋಬರ್ 11ಕ್ಕೆ ತೆರೆ ಮೇಲೆ ತೆರೆದುಕೊಳ್ಳಲಿದೆ. ಮಾರ್ಟಿನ್ ಟ್ರೈಲರ್, ಟೀಸರ್ ಸ್ಯಾಂಪಲ್ಸ್ ನೋಡಿದವರು ಈ ಸಿನಿಮಾ ಈ ಮಟ್ಟಕ್ಕೆ ಅದ್ಧೂರಿಯಾಗಿ ಸೃಷ್ಟಿಯಾಗಿದ್ದು ಹೇಗೆ ಅಂತ ಕೇಳ್ತಿದ್ದಾರೆ. ಅದರ ಹಿಂದಿನ ಶಕ್ತಿ ಯುಕ್ತಿ ಆ ಆರು ಜನ. ಮಾರ್ಟಿನ್ ಹಾಲಿವುಡ್ ರೇಂಜ್ನಲ್ಲಿ ಕಾಣ್ತಿದೆ. ಅದಕ್ಕೆ ಕಾರಣ ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿದೆ ಅನ್ನೋದು.
ಸ್ಯಾಂಪಲ್ಸ್ ನಿಂದಲೇ ಮಾರ್ಟಿನ್ ಆ ನಂಬಿಕೆ ಹುಟ್ಟಿಸಿದೆ. ಇದಕ್ಕೆಲ್ಲಾ ಕಾರಣ ನಿರ್ಮಾಪಕ ಉದಯ್ ಕೆ ಮೆಹ್ತಾ, ನಿರ್ದೇಶಕ ಎ.ಪಿ ಅರ್ಜುನ್, ಛಾಯಗ್ರಹಕ ಸತ್ಯ ಹೆಗಡೆ, ಸ್ಟಂಟ್ ಮಾಸ್ಟರ್ ರವಿವರ್ಮಾ ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆರೆ. ಹಾಗು ಸಂಗೀತ ನಿರ್ದೇಶಕ ರವಿ ಬಸ್ರೂರು. ಮಾಸ್ ಎಂಟರ್ಟೈನ್ಮೆಂಟ್ ಮಾರ್ಟಿನ್ ನಲ್ಲಿ ಆ್ಯಕ್ಷನ್ ಧಮಾಕ ಕಾಣ್ತಿದೆ. ಧ್ರುವ ಸರ್ಜಾ ಸೋಲ್ಜರ್ ಆಗಿ ಬಂದಿದ್ದಾರೆ. ಒಂದ್ ಕಡೆ ವಾರ್ ಫೀಲ್ಡ್ ಮತ್ತೊಂದು ಕಡೆ ಜೈಲು. ಅದರಲ್ಲಿ ರಣಹದ್ದುಗಳಂತೆ ಕಾದಾಡೋ ದೈತ್ಯ ಪ್ರತಿಭೆಗಳು. ಇವರ ಮಧ್ಯೆ ಕಾದಾಟ ಸೃಷ್ಟಿಸಿದ್ದು ಒನ್ ಆ್ಯಂಡ್ ಓನ್ಲಿ ರವಿ ವರ್ಮಾ.. ಇವರ ಬಗ್ಗೆ ನಿಮಗೆ ಹೇಳ್ಬೇಕಿಲ್ಲ ಬಿಡಿ. ಇವರು ಪ್ಯಾನ್ ಇಂಡಿಯಾ ಸ್ಟಂಟ್ ಮಾಸ್ಟರ್.
ಸಲ್ಮಾನ್ ಖಾನ್ರಿಂದ ಹಿಡಿದು ರಜನಿಕಾಂತ್, ಯಶ್ ಪ್ರಭಾಸ್ ವರೆಗೂ ಎಲ್ಲರಿಗೂ ಸ್ಟಂಟ್ ಡೈರೆಕ್ಟ್ ಮಾಡಿದವರು. ಈಗ ಮಾರ್ಟಿನ್ನ ಆಕ್ಷನ್ ಹಿಂದಿನ ಶಕ್ತಿ ಕೂಡ ಇವರೇ. ಮಾರ್ಟಿನ್ ಟ್ರೈಲರ್ ನೋಡಿದವರಿಗೆ ಗೊತ್ತಾಗುತ್ತೆ ಈ ಸಿನಿಮಾ ಟೆಕ್ನಿಕಲಿ ಎಷ್ಟು ಸ್ಟ್ರಾಂಗ್ ಇದೆ ಅಂತ. ಹಾಲಿವುಡ್ನ ನೇಚರ್ ಕಾಣ್ತಿದೆ. ಕೆಜಿಎಫ್ ಸಿನಿಮಾದ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರು ಮಾರ್ಟಿನ್ಗೆ ಕ್ವಾಲಿಟಿ ಟ್ಯೂನ್ ಹಾಕಿದ್ದಾರೆ. ಕನ್ನಡದ ಕೆಲವೇ ಕೆಲವು ಸ್ಟೈಲೀಶ್, ಟ್ಯಾಲೆಂಟೆಡ್ ಛಾಯಾಗ್ರಹಕರಲ್ಲಿ ಸತ್ಯ ಹೆಗಡೆ ಕೂಡ ಒಬ್ರು. ಮಾರ್ಟಿನ್ ಸೆರೆಯಾಗಿದ್ದು ಇವರ ಕ್ಯಾಮೆರಾ ಕಣ್ಣಲ್ಲೇ. ಆ ಕಡೆ ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆ ಈ ಸಿನಿಮಾದ ವಿಶ್ಯುವಲ್ ಟ್ರೀಟ್ಗೆ ಅದ್ಧೂರಿ ಸೆಟ್ ಹಾಕಿದ್ದಾರೆ. 105 ಕೋಟಿ ಬಜೆಟ್ನಲ್ಲಿ ಹೆಚ್ಚು ಖರ್ಚಾಗಿದ್ದು ಇದೇ ಸೆಟ್ಗೆ.