ಲೆಕ್ಕಾಚಾರ ನಿಜ ಆಯ್ತು: ಆಯುಧ ಪೂಜೆ ದಿನ ಅದ್ಭುತ ಸುದ್ದಿ ಕೊಟ್ಟ ಅಶ್ವಿನಿ ಪುನೀತ್ ರಾಜ್​ಕುಮಾರ್

Oct 12, 2024, 11:21 AM IST

ದಸರಾ ಸಂಭ್ರಮ ಜೋರಾಗಿದೆ. ಆ ಕಡೆ ದೊಡ್ಮನೆಯಲ್ಲೂ ಹಬ್ಬದ ಕಳೆ ಹೆಚ್ಚಾಗಿದೆ. ಯಾಕಂದ್ರೆ ಅಪ್ಪು ಆಸೆಯಂತೆ ಸಿನಿ ರಂಗಕ್ಕೆ ಬಂದಿದ್ದ ಜ್ಯೂನಿಯರ್ ಪವರ್ ಸ್ಟಾರ್​ ಯುವ ರಾಜ್​ಕುಮಾರ್​​ ಹಬ್ಬದ ದಿನವೇ ತನ್ನ ಹೊಸ ಸಿನಿಮಾ ಸೂಪರ್ ವಿಚಾರ ರಿವಿಲ್ ಮಾಡಿದ್ದಾರೆ. ಆಯುಧ ಪೂಜೆ ದಿನವೇ ತನ್ನ ಮನೆಯ ಕುಡಿಯ ಎರಡನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ ದೊಡ್ಮನೆ ಸೊಸೆ ಪುನೀತ್​ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್​. ಈಗಾಗಲೇ 'ಯುವ' ಮೂಲಕ ಪವರ್‌ಫುಲ್ ಪರ್ಫಾರ್ಮನ್ಸ್ ಕೊಟ್ಟು ಅಣ್ಣಾವ್ರ ಮೊಮ್ಮಗ ಯುವ ರಾಜ್​ಕುಮಾರ್​ ಪ್ರ್ಯೂ ಮಾಡಿದ್ದಾರೆ. ಇದೀಗ 2ನೇ ಸಿನಿಮಾ ಸೆಟ್ಟೇರಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸಿನಿಮಾ ನಿರ್ಮಾಣ ಮಾಡುತ್ತಿರೋದು ಕನ್ನಡದ ಹೆಮ್ಮೆ ಪಿಆರ್​ಕೆ ಪ್ರೊಡಕ್ಷನ್​ ಹಾಗು ಜಯಣ್ಣ ಕಂಬೈನ್ಸ್​, ಹಾಗು ಕೆಆರ್​​ಜಿ ಕನೆಕ್ಷನ್​​. 

ಯುವ ರಾಜ್​ಕುಮಾರ್​​ರನ್ನ ತನ್ನ ಹೋಮ್ ಬ್ಯಾನರ್ ​​ಪಿಆರ್​​ಕೆ ಪ್ರೊಡಕ್ಷನ್​​ನಲ್ಲೇ ಲಾಂಚ್​ ಮಾಡಬೇಕು ಅನ್ನೋ ದೊಡ್ಡ ಆಸೆ ಪುನೀತ್​ರಾಜ್​ಕುಮಾರ್​​ಗಿತ್ತು. ಆದ್ರೆ ಅದು ಸಾಧ್ಯ ಆಗ್ಲಿಲ್ಲ. ಅಷ್ಟರಲ್ಲಾಗ್ಲೆ ಪುನೀತ್​ರನ್ನ ಕಳೆದುಕೊಳ್ಳಬೇಕಾಯ್ತು. ಯುವ ಹೊಂಬಾಳೆ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಈಗ ಅಪ್ಪು ಆಸೆ ಕನಸು ಈಡೇರಿದೆ. ಪುನೀತ್ ರಾಜ್​​ಕುಮಾರ್​​​ರ ಪಿಆರ್​ಕೆಯಿಂದಲೇ ಯುವ ಎರಡನೇ ಸಿನಿಮಾ ನಿರ್ಮಾಣ ಆಗುತ್ತಿದೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಜೊತೆ ನಿರ್ಮಾಪಕ ಜಯಣ್ಣ, ಕಾರ್ತಿಕ್​ ಹಾಗು ಯೋಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾವನ್ನ ರತ್ನಪ್ರಪಂಚ ಸಿನಿಮಾ ಖ್ಯಾತಿಯ ರೋಹಿತ್ ಪದಕಿ ನಿರ್ದೇಶಿಸುತ್ತಿದೆ. ಈ ಮೂಲಕ ದಸರಾ ಹಬ್ಬಕ್ಕೆ ಯುವ ದೊಡ್ಮನೆ ಫ್ಯಾನ್ಸ್​ಗೆ ಹೊಸ ಸಿನಿಮಾ ಅನೌನ್ಸ್ ಮಾಡಿ ಧಮಾಕ ಸುದ್ದಿ ಕೊಟ್ಟಿದ್ದಾರೆ.