Oct 30, 2022, 1:57 PM IST
ಖ್ಯಾತ ರಂಗಭೂಮಿ ಕಲಾವಿದೆ ಚಂದ್ರಕಲಾ ಭಟ್. ಕಾಂತಾರ ಸಿನಿಮಾದಲ್ಲಿ ಹಲ್ಲು ಉಬ್ಬಿ ಶೀಲಾ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ಎರಡೂವರೆ ದಶಕದಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಚಂದ್ರಕಲಾ ಭಟ್ ಶೀಲಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಚಂದ್ರಕಲಾ ಅವರು, ಇಂಥ ಪಾತ್ರ ಮಾಡುತ್ತೇನೆ ಎಂದು ಖಂಡಿತಾ ಎಣಿಸಿರಲಿಲ್ಲ ಎಂದಿದ್ದಾರೆ. ನನ್ನ ಪಾತ್ರ ತುಂಬಾ ಟ್ರೋಲ್ ಮಾಡುತ್ತಿದ್ದಾರೆ. ವಿರೇಂದ್ರ ಹೆಗ್ಡೆ ಅವರು ಕೂಡ ನನ್ನ ಪಾತ್ರ ನೋಡಿ ಖುಷಿ ಪಟ್ಟಿದ್ದಾರೆ. ನಿಮ್ಮ ಪಾತ್ರ ತುಂಬಾ ಟ್ರೋಲ್ ಆಗುತ್ತಿದೆ ಎಂದು ಹೇಳಿದರು. ಪಾತ್ರದಲ್ಲಿ ನನ್ನ ಹಲ್ಲು ಉಬ್ಬು. ಹಾಗಾಗಿ ನನ್ನನ್ನು ಯಾರು ಗುರುತು ಹಿಡಿಯುತ್ತಿಲ್ಲ. ಮೊದಲು ನನ್ನ ಪಾತ್ರದ ಬಗ್ಗೆ ಕೇಳಿ ಇದೆಂತ ಪಾತ್ರ ಅಂತ ತಲೆಕೆಡಿಸಿಕೊಂಡಿದ್ದೆ. ಮೊದಲ ದಿನದ ಶೂಟಿಂಗ್ ನಲ್ಲಿ ತುಂಬಾ ಕಷ್ಟವಾಗಿತ್ತು. ರಿಷಬ್ ಸರ್ ಪ್ರಯತ್ನ ಹಾಕಿ ನಮ್ಮಿಂದ ಅಭಿನಯ ತೆಗೆಸಿದ್ದಾರೆ. ನಾನು ರಂಗಭೂಮಿಯಲ್ಲಿ ಇದ್ದು ಗುರುತಿಸಿಕೊಳ್ಳಲು ಈ ಕಾಂತಾರ ಸಿನಿಮಾ ಕಾರಣವಾಯಿತು' ಎಂದು ಹೇಳಿದ್ದಾರೆ.