Oct 22, 2022, 12:28 AM IST
ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತನಾಡಿ ಅಪ್ಪು ಅವರನ್ನು ಹಾಡಿಹೊಗಳಿದರು. ದೊಡ್ಮನೆ ಜೊತೆಗಿನ ನಮ್ಮ ಕುಟುಂಬದ ಬಾಂಧವ್ಯ ಚೆನ್ನಾಗಿದೆ ಇದು ನನಗೆ ಹೆಮ್ಮೆ ಎಂದು ಹೇಳಿದರು. ಅಪ್ಪ, ರಾಜ್ ಕುಮಾರ್ ಅವರಿಗೆ ತೆಲುಗಿಗೆ ವಾಯ್ಸ್ ಡಬ್ ಮಾಡಿದ್ದರು. ಯುವರತ್ನ ಸಿನಿಮಾದಲ್ಲಿ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತು. ಅಪ್ಪು ಪರೋಪಕಾರಿ, ಹೃದಯವಂತ, ನೇತ್ರದಾನಿ, ತಂದೆ ಹೆಸರು ಉಳಿಸಿದ ಕಂದ, ಗಂಧದ ಗುಡಿಯ ತಿಲಕ ಅಪ್ಪು ಎಂದು ಹಾಡಿಹೊಗಳಿದರು.