Jul 27, 2023, 3:44 PM IST
ಅಪ್ಪು ಕನಸುಗಳಿಗೆ ನೀರೆರೆದು ಪಿ ಆರ್ ಕೆ ಬ್ಯಾನರ್(PRK banner) ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಅಶ್ವಿನಿ ಪುನಿತ್ ರಾಜ್‌ಕುಮಾರ್(Ashwin puneeth rajkumar) ಇದೀಗ ಮತ್ತೊಂದು ವಿಭಿನ್ನ ಸಿನಿಮಾವನ್ನು(Cinema) ನಿರ್ಮಾಣ ಮಾಡಿದ್ದಾರೆ. ಮಹಿಳೆಯರೇ ಸೇರಿ ಮಾಡಿದ್ದಾರೆ ಆಚಾರ್ ಅಂಡ್ ಕೊ ಸಿನಿಮಾ(Achar and co movie). ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಈ ಚಿತ್ರ ತುಂಬಾ ಹೊಸತನದಿಂದ ಕೂಡಿದೆ ಎನ್ನುವುದು ಚಿತ್ರದ ಟ್ರೈಲರ್ ಹೇಳುತ್ತಿದೆ. 1960 ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಕಥೆ ಒಂದು ಕುಟುಂಬ ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತದೆ. ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನೂ ಹೇಗೆ ನಿಭಾಯಿಸಿ ಗೆಲ್ಲುತ್ತದೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಚಿತ್ರವಾಗಿದೆ. ಅರವತ್ತರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ವಿನೂತನ ಆಲೋಚನೆಯೊಂದನ್ನು ಹೊಂದಿದೆ.
ಇದನ್ನೂ ವೀಕ್ಷಿಸಿ: ಶಿವಣ್ಣ ಕೊಟ್ಟ ಚಮಕ್‌ಗೆ ನಾಚಿ ನೀರಾದ ಮುದ್ದು ಹುಡುಗಿ: ತಮಾಶೆ ಮಾಡೋದ್ರಲ್ಲಿ ಟಾಪರ್ ನಮ್ ಸೆಂಚುರಿ ಸ್ಟಾರ್ !