Jun 16, 2023, 4:04 PM IST
ಮಂಡ್ಯ: ಅಭಿಷೇಕ್ ಹಾಗೂ ಅವಿವಾ ಬೀಗರ ಔತಣ ಕೂಟಕ್ಕೆ ಸಾವಿರಾರು ಜನ ಒಮ್ಮೆಯೇ ಮುಗಿಬಿದ್ದರು.ಅಲ್ಲಿ ಹಾಕಿದ್ದ ಬ್ಯಾರಿಕೇಟ್ ಕಿತ್ತೊಗೆದು ಊಟ ಹಾಕುತ್ತಿದದ ಜಾಗಕ್ಕೆ ಜನ ನುಗ್ಗಿದ್ದಾರೆ. ಊಟ ಬಡಿಸಲೂ ಜಾಗ ಬಿಡದೆ ಅಲ್ಲಿಗೆ ನುಗ್ಗಿದ್ದಾರೆ. ಜನ ನುಗ್ಗಿದ ಪರಿಣಾಮ ಊಟ ಬಡಿಸುವುದು ನಿಧಾನವಾಯಿತು.ಅರ್ಧ ಗಂಟೆ ನೋಡಿ ಬಳಿಕ ಅಡುಗೆ ಮಾಡುತ್ತಿದ್ದ ಜಾಗಕ್ಕೆ ಜನ ನುಗ್ಗಿದ್ದಾರೆ. ಪಾತ್ರೆಗಳಿಗೆ ಕೈ ಹಾಕಿ ಮಟನ್, ಚಿಕನ್ ತುಂಬಿಕೊಂಡು ತಿನ್ನಲಾರಂಭಿಸಿದ್ದಾರೆ. ಎಷ್ಟೇ ಮನವಿ ಮಾಡಿದ್ರೂ ಜಗ್ಗದೆ ಎಲೆಗೆ ಬಿರಿಯಾನಿ,ಬೋಟಿ ಗೊಜ್ಜು, ಚಿಕನ್ ಹಾಕಿಕೊಂಡು ತಿಂದಿದ್ದಾರೆ.ಊಟದ ಮನೆಗೆ ಜನ ನುಗ್ಗಿದ್ರಿಂದ ದಿಕ್ಕು ತೋಚದೆ ಬಾಣಸಿಗರು ಸುಮ್ಮನೆ ನಿಂತಿದ್ದರು.ಊಟ ಬಡಿಸಲು ಬಿಡದೆ ತಮಗೆ ಬೇಕಾದಷ್ಟು ಎಲೆ, ಪ್ಲೇಟ್ ಗಳಿಗೆ ತುಂಬಿಕೊಂಡು ಅಡುಗೆ ಮಾಡುತ್ತಿದ್ದ ಜಾಗದಲ್ಲೇ ಜನ ತಿನ್ನಲಾರಂಭಿಸಿದ್ದಾರೆ.ಕೆಲವರು ಮಾಡಿದ ತಪ್ಪಿಗೆ ಸಾವಿರಾರು ಜನರು ಊಟ ಮಾಡದೇ ವಾಪಸ್ಸಾಗುವಂತ ದುಸ್ಥಿತಿ ಎದುರಾಯಿತು.ಬೇಸರದಲ್ಲೇ ಮನೆಗಳತ್ತ ಹೊರಟರು.ಅಲ್ಲದೇ ಉಸ್ತುವಾರಿ ಹೊಣೆ ಹೊತ್ತವರು ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ವೀಕ್ಷಿಸಿ: Yash New Car: ಹೊಸ ಕಾರು ಖರೀದಿಸಿ ಹೆಂಡತಿ-ಮಕ್ಕಳೊಂದಿಗೆ ಡ್ರೈವ್ ಹೋದ ಯಶ್ !