ಆನಂದ್ ಸಿಂಗ್ ರಾಜೀನಾಮೆ ಎಚ್ಚರಿಕೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ

Aug 7, 2021, 6:58 PM IST

ಹುಬ್ಬಳ್ಳಿ, (ಆ.07): ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ನೀಡಿರುವ ಖಾತೆ ತೃಪ್ತಿ ಇಲ್ಲವೆಂದು ಕೆಲ ಸಚಿವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಖಾತೆ ಕ್ಯಾತೆ: ಸಿಎಂ ಬೊಮ್ಮಾಯಿಗೆ ರಾಜೀನಾಮೆ ಎಚ್ಚರಿಕೆ ಕೊಟ್ಟ ಸಚಿವ

ಕೇಳಿದ್ದು ಕೊಡಲಿಲ್ಲ ಅಂದ್ರೆ ಶಾಸಕನಾಗಿರುತ್ತೇನೆಂದು ಹೇಳುವ ಮೂಲಕ  ಆನಂದ್ ಸಿಂಗ್ ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಇಂದು (ಶನಿವಾರ) ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ..