Jan 15, 2021, 12:54 PM IST
ಬೆಂಗಳೂರು (ಜ. 15): ರಾಜ್ಯ ರಾಜಕಾರಣದಲ್ಲಿ ಎಸ್‌ಬಿಎಂ ಟ್ರಾವೆಲ್ಸ್ ಎಂದೇ ಹೆಸರು ಪಡೆದಿದ್ದವರು ಸೋಮಶೇಖರ್ ರೆಡ್ಡಿ, ಭೈರತಿ ಬಸವರಾಜು ಹಾಗೂ ಮುನಿರತ್ನ ಸ್ನೇಹಕೂಟ. ಸ್ನೇಹಿತರು ಅಂದ್ರೆ ಹೀಗಿರಬೇಕಪ್ಪಾ ಎಂದು ಹೆಸರು ಮಾಡಿದವರು. ಆದರೆ ಅದೇ ಸ್ನೇಹಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬೈರತಿ ಹಾಗೂ ಸೋಮಶೇಖರ್ ರೆಡ್ಡಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಮುನಿರತ್ನ ಮಂತ್ರಿಸ್ಥಾನದಿಂದ ವಂಚಿತರಾಗಿದ್ದಾರೆ.
3+2 ಅವರೇ ಮಾಡ್ತಿದ್ದಾರಾ ಬ್ಲಾಕ್ ಮೇಲ್..? ಸಿಎಂ ಮಾತ್ರ ಡೋಂಟ್ ಕೇರ್!
ಮುನಿರತ್ನ ಪರ ಭೈರತಿಯವರಾಗಲಿ, ಸೋಮಶೇಖರ್ ರೆಡ್ಡಿಯವರಾಗಲಿ ಮಾತಾಡ್ತ ಇಲ್ಲ. ಯಾಕ್ ಸಾರ್ ಹೀಗೆ ಎಂದು ಮುನಿರತ್ನರನ್ನು ಪ್ರಶ್ನಿಸಿದಾಗ, ಅವರು ಕೆಲಸದ ಒತ್ತಡದಲ್ಲಿದ್ದಾರೆ. ಇವೆಲ್ಲಾ ಸಹಜ ರೀ ಎಂದಿದ್ದಾರೆ. ಹಾಗಾದ್ರೆ ಮಿತ್ರ ಮಂಡಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ಯಾಕೆ..?