Jan 14, 2021, 3:43 PM IST
ಬೆಂಗಳೂರು(ಜ.14): ಯತ್ನಾಳ್ ಸಿಡಿ ಅಂದರೆ, ಸುನಿಲ್ ಬ್ಲ್ಯಾಕ್‌ಮೇಲ್ ಅಂತಾರೆ ಹಾಗಿದ್ದರೆ ಸಚಿವ ಸಂಪುಟ ವಿಸ್ತರಣೆ ಬ್ಲ್ಯಾಕ್‌ಮೇಲ್ ಮೂಲಕ ಆಗಿದೆಯಾ ಅಂತ ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ವ್ಯಂಗ್ಯವಾಡಿದ್ದಾರೆ. ಸಿಎಂ ಮುನಿರತ್ನಗೆ ಸಚಿವ ಸ್ಥಾನ ಕೊಡಬೇಕಿತ್ತು, ಅದರೆ, ಕೊಟ್ಟಿಲ್ಲ. ಸುಧಾಕರ್ ನಮ್ಮಲ್ಲಿ ಇದ್ದಿದ್ದರೆ ಮೂರು ಸ್ಥಾನಗಳು ಸಿಗುತ್ತಿತ್ತು. ಆದರೆ ಇದೀಗ ಎರಡು ಸ್ಥಾನಗಳು ಸಿಕ್ಕಿವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆದ ಶಾಸಕರು ಹಾಗೂ ಸಚಿವರಿಗೆ ಕುಟುಕಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಬಿಜೆಪಿ ಪಾಳಯದಲ್ಲಿ ಆದ ಬದಲಾವಣೆಗೆ ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ.