ಇನ್ಮುಂದೆ ವಿಧಾನಸಭೆಗೆ ಕಾಲಿಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?

Dec 11, 2020, 6:09 PM IST

ಬೆಂಗಳೂರು (ಡಿ. 11): ರಾಜ್ಯ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅಂಗೀಕರಿಸಿತು. ಈ ಕಾಯ್ದೆಯ ಬಗ್ಗೆ ವಿಧಾನಮಂಡಲ ಕಲಾಪದಲ್ಲಿ ಚರ್ಚೆ ಮಾಡದೇ ಇದ್ದಕ್ಕಿದ್ದಂತೆ ಅಂಗೀಕಾರ ಮಾಡಿರುವುದಕ್ಕೆ  ವಿಪಕ್ಷನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅನ್ಯಗ್ರಹದ ಜೊತೆ ಸ್ನೇಹ ಸಂಪಾದಿಸಲು ಮುಂದಾದ ಎಲನ್ ಮಸ್ಕ್ ; ಏನಿದು ಹೊಸ ಟಾಸ್ಕ್?

ಇಂತಹ ಮಹತ್ವದ ಕಾಯ್ದೆಯ ಬಗ್ಗೆ ಚರ್ಚೆ ಮಾಡದೇ ಹೇಗೆ ಅಂಗೀಕರಿಸಿದ್ದೀರಿ? ನಿಮಗೆ ಬೇಕಾದ ಹಾಗೆ ಮಾಡಿಕೊಳ್ಳಿ. ನಾನಿನ್ನು ವಿಧಾನಸಭೆಗೆ ಬರುವುದಿಲ್ಲ. ನಿಮ್ಮಿಷ್ಟದಂತೆ ಮಾಡಿಕೊಳ್ಳಿ' ಎಂದು ನೇರವಾಗಿ ಸಿದ್ದರಾಮಯ್ಯ ಸ್ಪೀಕರ್‌ಗೆ ಹೇಳಿದರು. ಸದನದಲ್ಲಿ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ನಡುವಿನ ಮಾತಿನ ಚಕಮಕಿ ಜೋರಾಗಿ ನಡೆದಿದೆ. ಈ ಬಗ್ಗೆ ಇನ್‌ಸೈಡ್ ಪಾಲಿಟಿಕ್ಸ್ ಇಲ್ಲಿದೆ ನೋಡಿ..!