Jan 12, 2022, 6:19 PM IST
ರಾಮನಗರ, (ಜ.12): ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
Mekedatu Padaytre: ಪಾದಯಾತ್ರೆ ವೇಳೆ ಸುಸ್ತು, ಕಾರನ್ನೇರಿದ ಸಿದ್ದರಾಮಯ್ಯ
ಇಂದು(ಬುಧವಾರ) 7 ಕಿ.ಮೀ ಪಾದಯಾತ್ರೆಯಿಂದ ಬಳಲಿರುವ ಸಿದ್ದರಾಮಯ್ಯಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ರಾಮನಗರದ ಕಾಂಗ್ರೆಸ್ ನಾಯಕರೊಬ್ಬರ ಮನೆಗೆ ವಿಶ್ರಾಂತಿಗೆ ತರಳಿದ್ದಾರೆ. ನಂತರ ತೀವ್ರ ಬ್ಯಾಕ್ ಪೈನ್ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಾಸ್ ಹೊರಟಿದ್ದಾರೆ.