Apr 8, 2021, 4:24 PM IST
ಚಿಕ್ಕಮಗಳೂರು( ಏ. 08) ಯಡಿಯೂರಪ್ಪ ನನ್ನ ತಂದೆ, ವಿಜಯೇಂದ್ರ ತಮ್ಮನೇ ಇರಬಹುದು . ಅವರು ಅವರದ್ದೇ ಆದಂತ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಅಲ್ಲದಿದ್ರು ಪಕ್ಷಕ್ಕೆ ಮುಜುಗರದ ಕೆಲಸ ಆಗುತ್ತಿದೆ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ ಸಮಯ ಬಂದಾಗ ಉತ್ತರ ಕೊಡೋರು ಕೊಡ್ತಾರೆ ಹೀಗೆ ಹೇಳಿದ್ದು ಸಂಸದ ಬಿವೈ ರಾಘವೇಂದ್ರ.
'ಗುರು-ಶಿಷ್ಯರ ಕಾಳಗ ಎಲ್ಲಿಗೆ ಬಂತು'
ರಾಜ್ಯದ ಜನರು ಪ್ರಜ್ಞಾವಂತರಿದ್ದಾರೆ. ಒಳ್ಳೆ ಕಾರ್ಯಕ್ರಮ ನೀಡುತ್ತಿರುವ ಸರ್ಕಾರದೊಂದಿಗೆ ಸದಾ ಇರುತ್ತಾರೆ ಎಂದರು. ಚಿಕ್ಕಮಗಳೂರಿನವರೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿದ್ದಾರೆ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.