Dec 14, 2019, 4:23 PM IST
ಬೆಂಗಳೂರು, (ಡಿ.14): ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿಗೆ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಜಾರ್ಖಂಡ್ ಚುನಾವಣಾ ಸಮಾವೇಶಲ್ಲಿ ಮಾತನಾಡಿದ್ದ ಅವರು, ಕರ್ನಾಟಕದ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸ್ಥಿರ ರಾಜಕೀಯಕ್ಕಾಗಿ ಜನರ ಒಲವನ್ನು ತೋರಿಸಿದೆ ಎಂದು ಬಣ್ಣಿಸಿದ್ದರು.
ಉಪಕದನ ಗೆದ್ದ ಬಿಎಸ್‌ವೈಗೆ ಕೇಂದ್ರದಿಂದ ಅದ್ದೂರಿ ಗಿಫ್ಟ್, ಎದ್ದು ನಿಲ್ಲಲೇಬೇಕು!
ಇದೀಗ ಮತ್ತೆ ಇಂದು (ಶನಿವಾರ) ಬೆಳ್ಳಂಬೆಳಗ್ಗೆ ನರೇಂದ್ರ ಮೋದಿ ಅವರು ಬಿ.ಎಸ್.ಯಡಿಯೂರಪ್ಪಗೆ ದೂರವಾವಣಿ ಕರೆ ಮಾಡಿ ಮತ್ತೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ ಬಿಎಸ್‌ವೈಗೆ ಮೋದಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ವಿಡಿಯೋನಲ್ಲಿ ನೋಡಿ.