ಯುವರಾಜ್ ಜೊತೆ ಫೋಟೋ, ಸಚಿವ, ಶಾಸಕರಿಗೆ ಫಜೀತಿ..!

Jan 10, 2021, 10:12 AM IST

ಬೆಂಗಳೂರು (ಜ. 10): ವಂಚಕ ಯುವರಾಜ್ ಜೊತೆ ಡಿಸಿಎಂ ಸವದಿ, ವಸತಿ ಸಚಿವ ವಿ. ಸೋಮಣ್ಣ, ಶಾಸಕರಾದ ಮುರುಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ಕಾಂಗ್ರೆಸ್ ಮಾಜಿ ಉಸ್ತುವಾರಿ ವೇಣುಗೋಪಾಲ್ ಜೊತೆ ಯುವರಾಜ್ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.

ಸಂಪುಟ ಕಸರತ್ತು, ಸಿಎಂ ಪಟ್ಟಿಯಲ್ಲಿದೆ ಈ ಸಚಿವಾಕಾಂಕ್ಷಿಗಳ ಹೆಸರು, ಇಲ್ಲಿದೆ ಟ್ವಿಸ್ಟ್!

ರಾಜಕೀಯ ಸಂಚಲನ ಮೂಡಿಸುತ್ತಿವೆ. ಈ ಫೋಟೋಗಳಿಂದ ರಾಜಕೀಯ ಮುಖಂಡರಿಗೆ ಮುಜುಗರವಾಗಿದ್ದು, ನಮಗೂ, ಆತನಿಗೂ ಯಾವುದೇ ಸಂಬಂಧ ಇಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ ಫೋಟೋ ತೆಗೆದುಕೊಂಡಿದ್ದಷ್ಟೇ ಎಂದು ತೇಪೆ ಹಚ್ಚುತ್ತಿದ್ದಾರೆ. ಈ ಕೇಸ್‌ನಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತವೆಂದು 'ಕೈ' ಪಾಳಯ ನಿರ್ಧರಿಸಿದರೆ, ಮೌನಕ್ಕೆ ಶರಣಾಗಿದ್ದಾರೆ ಎಚ್‌ಡಿಕೆ.