"ಡಿಕೆಶಿ ಕಾರಣಕ್ಕೇ ಸರ್ಕಾರ ಪತನ" ಸಾಹುಕಾರನ ಹೊಸ ಬಾಂಬ್: ಕರ್ನಾಟಕದಲ್ಲಿ ನಡೆಯಲಿದ್ಯಂತೆ "ಅಜಿತ್ ಪವಾರ್" ಆಟ..!

Oct 31, 2023, 2:19 PM IST

"ತೋಳ ಬಂತು ತೋಳ" ಕಥೆಯನ್ನು ನೀವು ಕೇಳಿರ್ತೀರಿ. ಅದು ಗುಮ್ಮ ಬಂತು ಗುಮ್ಮ ಕಥೆ. ಆಪರೇಷನ್ ಗುಮ್ಮನ ಕಥೆ. ರಾಜ್ಯ ರಾಜಕಾರಣಕ್ಕೆ ಮತ್ತೆ ಆಪರೇಷನ್ ಗುಮ್ಮ ಎದ್ದು ನಿಂತಿದೆ. ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಆಪರೇಷನ್(Operation) ಪಿತೂರಿ ಶುರುವಾಗಿದ್ಯಂತೆ. 135 ಶಾಸಕರನ್ನು ಬೆನ್ನಿಗೆ ಕಟ್ಟಿಕೊಂಡಿರೋ ಕಾಂಗ್ರೆಸ್ ಸರ್ಕಾರಕ್ಕೆ ಆಪರೇಷನ್ ಆತಂಕ. ಬಿಜೆಪಿಯವ್ರು(BJP) ಎಲ್ಲಿ ನಮ್ಮ ಸರ್ಕಾರವನ್ನು ಕೆಡವಿ ಬಿಡ್ತಾರೋ ಅನ್ನೋ ಭಯ. ಆ ಭಯಕ್ಕೆ ಕಾರಣವೂ ಇದೆ ಆಪರೇಷನ್ ಆಟದಲ್ಲಿ ತಾನೆಷ್ಟು ಚಾಣಕ್ಯ ಅನ್ನೋದನ್ನು ಬಿಜೆಪಿ ಈಗಾಗ್ಲೇ ತೋರಿಸಿ ಬಿಟ್ಟಿದೆ. ಆಪರೇಷನ್ ಆಟದಿಂದ್ಲೇ ರಾಜ್ಯದಲ್ಲಿ ಬಿಜೆಪಿ ಎರಡೆರಡು ಬಾರಿ ಅಧಿಕಾರಕ್ಕೆ ಬಂದಿರೋ ಚರಿತ್ರೆಯೇ ಇದ್ಯಲ್ಲಾ.. ಎರಡು ಬಾರಿ ಸಕ್ಸಸ್ ಆಗಿರೋ ಬಿಜೆಪಿ, 3ನೇ ಬಾರಿ ಮತ್ತೆ ಆಪರೇಷನ್ ಆಟಕ್ಕೆ ಕೈ ಹಾಕಿದ್ಯಾ..? ಬಿಜೆಪಿಯಿಂದ್ಲೇ ಕಾಂಗ್ರೆಸ್‌ಗೆ ಬಂದ ಶಾಸಕರೊಬ್ಬರು ಈ ರೀತಿ ಹೇಳ್ತಿದ್ದಾರೆ ಅಂದ್ರೆ ತೆರೆಯ ಹಿಂದೆ ಏನೋ ನಡೀತಾ ಇದೆ ಅಂತಾನೇ ಅರ್ಥ. ಅಷ್ಟಕ್ಕೂ ಪ್ರಚಂಡ ಶಕ್ತಿಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬಿಡೋದು ಬಾಯಲ್ಲಿ ಹೇಳಿದಷ್ಟು ಸುಲಭ ಅಂತೂ ಅಲ್ಲ. ಕಾರಣ ಸರ್ಕಾರದ ಬಳಿ ಬಹುಮತವನ್ನೂ ಮೀರಿದ ದೊಡ್ಡ ನಂಬರ್ ಇದೆ. ಕಾಂಗ್ರೆಸ್ ಬಳಿ ಇರೋದು ಸಣ್ಣ ನಂಬರ್ ಅಲ್ವೇ ಅಲ್ಲ. ಇದು ಗೊತ್ತಿದ್ದೂ ಗೊತ್ತಿದ್ದೂ ಯಾರಾದ್ರೂ ಆಪರೇಷನ್ ಆಟಕ್ಕೆ ಕೈ ಹಾಕ್ತಾರಾ..? ಆಪರೇಷನ್ ಶುರು ಮಾಡಿದಾಕ್ಷಣ ಸರ್ಕಾರವೇ ಬಿದ್ದು ಬಿಡತ್ತಾ..? ಖಂಡಿತಾ ಸಾಧ್ಯವಿಲ್ಲ ಮತ್ತದು ನಂಬೋ ಮಾತಲ್ಲ ಬಿಡಿ. ಹಾಗಿದ್ರೆ ಆಪರೇಷನ್ ಆಟವೇ ನಡೀತಾ ಇಲ್ವಾ..? ಎಲ್ಲಾ ಸುಳ್ಳಾ ಅಂತ ಕೇಳಿದ್ರೆ, ಆಟ ಶುರುವಾಗಿರೋದೂ ನಿಜ, ಆಮಿಷ ಒಡ್ತಾ ಇರೋದೂ ನಿಜ ಅಂತ ಕಾಂಗ್ರೆಸ್ ಶಾಸಕರೇ ಹೇಳ್ತಾರೆ.

ಇದನ್ನೂ ವೀಕ್ಷಿಸಿ:  ಮಾಜಿ ಸಿಎಂಗಳು, ಮಂತ್ರಿಗಳ ಮಕ್ಕಳಿಗಷ್ಟೇ ಆಧಿಕಾರವಾ..? ಪಕ್ಷದ ವಿರುದ್ಧ ಸಿಡಿದೆದ್ದ ಬೇಳೂರು ಗೋಪಾಲ ಕೃಷ್ಣ