ಹೊಸ ವರ್ಷದ ಖುಷಿಯಲ್ಲಿರುವ ಸಿದ್ದುಗೆ ಮೂಲ ಕಾಂಗ್ರೆಸ್ಸಿಗರು ಕೊಟ್ರು ಟೆನ್ಷನ್‌..!

Dec 31, 2019, 6:56 PM IST

ಬೆಂಗಳೂರು, [ಡಿ.31]: ಕರ್ನಾಟಕ ಕಾಂಗ್ರೆಸ್‍ನಲ್ಲಿ ವಲಸಿಗ ಮತ್ತು ಮೂಲ ಕಾಂಗ್ರೆಸ್ ಫೈಟ್ ಜೋರಾಗಿ ನಡೆಯುತ್ತಲೇ ಇದೆ. ದಿನೇ ದಿನೇ ಈ ಕಲಹ ದೊಡ್ಡದಾಗಿ ಹೋಗುತ್ತಿದೆ. ಹೇಗಾದರೂ ಮಾಡಿ ವಲಸಿಗ ಸಿದ್ದರಾಮಯ್ಯಗೆ ಅಧಿಕಾರ ಕೈ ತಪ್ಪಿಸಬೇಕು ಅಂತ ಮೂಲ ಕಾಂಗ್ರೆಸ್ ಟೀಂ ಓಡಾಡುತ್ತಿದೆ. 

2019 Flashback:1 ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೇನಾಯ್ತು?

ಇನ್ನೊಂದು ಕಡೆ ಮೂಲಕ ಕಾಂಗ್ರೆಸ್ಸಿಗರಿಗೆ ಟಕ್ಕರ್ ಕೊಡೋಕೆ ಸಿದ್ದರಾಮಯ್ಯ ಅಂಡ್ ಟೀಂ ಕೆಲಸ ಮಾಡುತ್ತಲೇ ಇದೆ. ಈಗ ಎರಡು ಟೀಂಗಳ ಮಧ್ಯೆ ವಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕನ ವಾರ್ ಪ್ರಾರಂಭವಾಗಿದೆ. ಇದಕ್ಕೆ ಪೂರಕವೆಂಬಂತೆ ಭೋಜನ ಕೂಟದ ನೆಪದಲ್ಲಿ ಸಭೆ ನಡೆಸಿ ಪೂರ್ವ ತಯಾರಿಸಿ ನಡೆಸಿದೆ.