Aug 23, 2022, 9:35 PM IST
ಬೆಂಗಳೂರು(ಆ.23): ನಮ್ಮ ಪಕ್ಷದ ವಿಶೇಷವೇ ಬೇರೆ ಇದೆ. ನಮ್ಮ ಪಕ್ಷದಲ್ಲಿ ಅಧ್ಯಕ್ಷ ಜವಾಬ್ದಾರಿ ಹುದ್ದೆಯಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಅವನ ಜವಾಬ್ದಾರಿಯನ್ನ ನಿಭಾಯಿಸುತ್ತಾನೆ. ಹಾಗಾಗಿ ಪಕ್ಷ ಪ್ರತಿಯೊಬ್ಬ ಕಾರ್ಯಕರ್ತನ ಮೇಲೆ ನಿಂತಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಇಂದು ಏಷ್ಯಾನೆಟ್ ಸುವರ್ನ ನ್ಯೂಸ್‌ನಲ್ಲಿ ಮಾತನಾಡಿದ ಅವರು, ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಚುನಾವಣೆ ಅನ್ನೋದು ಒಂದು ಸವಾಲು, ಪ್ರತಿಯೊಂದು ಚುನಾವಣೆಯೂ ಸವಾಲು ಆಗಿರುತ್ತದೆ ಅಂತ ತಿಳಿಸಿದ್ದಾರೆ.