Dec 16, 2020, 12:34 PM IST
ಬೆಂಗಳೂರು (ಡಿ. 16): ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯ ಸಂಬಂಧ ಸದಸ್ಯರುಗಳಿಗೆ ಪರಸ್ಪರ ವಾಕ್ಸಮರ, ತಳ್ಳಾಟ, ನೂಕಾಟ, ಗದ್ದಲಕ್ಕೆ ವಿಧಾನ ಪರಿಷತ್ ಸಾಕ್ಷಿಯಾಯಿತು. ಬೀದಿ ಪುಂಡರಂತೆ ಪರಸ್ಪರ ತಳ್ಳಾಡಿ, ಜಂಗಿಕುಸ್ತಿ ಮಾಡಿ ವಿಧಾನಪರಿಷತ್ ಘನತೆಗೆ ಕಪ್ಪು ಚುಕ್ಕೆಯಿಟ್ಟರು.
'ಹಸಿರು ಟವೆಲ್ ಮಾರಾಟಕ್ಕಿಟ್ಟು ಕೋಡಿಹಳ್ಳಿ ವಸೂಲಿ ದಂಧೆ ಮಾಡ್ತಿದ್ಧಾರೆ'
ಅವಿಶ್ವಾಸ ನಿರ್ಣಯ ಚರ್ಚೆ ಇದ್ದಿದ್ದರಿಂದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಆ ಸ್ಥಾನದಲ್ಲಿ ಕುಳಿತುಕೊಳ್ಳಬಾರದೆಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಉಪಸಭಾಪತಿ ಧರ್ಮೇಗೌಡರನ್ನು ಕಲಾಪದ ಗಂಟೆ ಬಾರಿಸುತ್ತಿದ್ದಂತೆ ಕುರ್ಷಿಯಲ್ಲಿ ಕೂರಿಸಿದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ಸಿಗರು ಉಪಸಭಾಪತಿಗಳನ್ನು ಎಳೆದೊಯ್ದರು. ನಂತರ ನಡೆದಿದ್ದೆಲ್ಲಾ ಹೈಡ್ರಾಮ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!