ಆಗ ಕಾರ್ಮಿಕನ ಮಗ..ಈಗ ಕೈ ಸಾರಥಿ..! ಹೊಸ ಅಧ್ಯಕ್ಷರಿಗೆ ನೂರಾರು ಸವಾಲುಗಳು..!

Oct 27, 2022, 2:45 PM IST

ಬೆಂಗಳೂರು(ಅ.27): ಕಾರ್ಮಿಕನ ಮಗ..ಈಗ ಕೈ ಸಾರಥಿ..! ನಿರೀಕ್ಷೆಯಲ್ಲಿ ರಾಹುಲ್, ನಿರಾಳರಾದ ಸೋನಿಯಾ ಭಾವುಕರಾದರು ಖರ್ಗೆ..ಹೊಸ ಅಧ್ಯಕ್ಷರಿಗೆ ನೂರಾರು ಸವಾಲುಗಳು ಗೆದ್ದು ಬೀಗುತ್ತಾರಾ ಕಲಬುರಗಿ ಕಲಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ 

ಅಂತೂ ಇಂತೂ ಗಾಂಧಿ ಕುಟುಂಬದ ಹೊರಗಿನವರು ಕೈ ಪಕ್ಷದ ಸಾರಥ್ಯವನ್ನ ಮೊಟ್ಟ ಮೊದಲ ಬಾರಿಗೆ ಸ್ವೀಕರಿಸಿದ್ದಾಗಿದೆ. ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಖರ್ಗೆ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅವರ ಅನುಭವವೇ ಅವರಿಗೆ ಮಾರ್ಗದರ್ಶಿಯಾಗಲಿದೆ ಅಂದ್ರೆ ಖಂಡಿತ ತಪ್ಪಾಗೋದಿಲ್ಲಾ. 

ಸಿದ್ದರಾಮಯ್ಯ ಫೋಟೋ ಕ್ಲಿಕ್ಕಿಸಿದ ಸಿಎಂ ಬೊಮ್ಮಾಯಿ‌!

ಅಧ್ಯಕ್ಷರಾದ ಬೆನ್ನಲ್ಲೇ ಖರ್ಗೆಯವರು ಮೋದಿ ಸರ್ಕಾರದ ವಿರುದ್ಧ ಹರಿಯಹಾಯ್ದಿದ್ದಾರೆ. ಮೋದಿ ವಿರುದ್ಧ ಕೆಂಡ ಕಾರಿದ್ದಾರೆ. ಎಐಸಿಸಿ ಅಧ್ಯಕ್ಷ ಗಾದಿಯಲ್ಲಿರೋ ಮಲ್ಲಿಕಾರ್ಜುನ ಖರ್ಗೆಯವರು ಮೋದಿ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ. ಮೋದಿ ಸರ್ಕಾರ ಮಲಗಿ ನಿದ್ರಿಸುತ್ತಿದೆ, ಇಡಿ, ಐಟಿ ಸಂಸ್ಥೆಗಳು ಮಾತ್ರ ಎಚ್ಚರವಾಗಿರಿ ಅಂತ ವ್ಯಂಗ್ಯವಾಡಿದ್ದಾರೆ. ಕನ್ನಡಿಗ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುರುಪು ಕಾಣಿಸ್ತಾ ಇದೆ. ಪಕ್ಷದ ನಾಯಕರು ಖರ್ಗೆಯವರಿಗೆ ಅಭಿನಂದಿಸಿದ್ದಾರೆ.