Mar 6, 2024, 12:09 PM IST
ದೇಶದ ದಕ್ಷಿಣ ದ್ವಾರದಲ್ಲಿ ಶುರುವಾಗಿದೆ ಮೋದಿ ರಣಾರ್ಭಟ.. 9 ರಾಜ್ಯಗಳು.. ಅಲ್ಲಿರೋದು 285 ಕ್ಷೇತ್ರಗಳು.. ಅಲ್ಲೆಲ್ಲಾ ಕೇಸರಿ ಕೋಟೆ ಕಟ್ಟೋಕೆ ಹೇಗೆ ಸಿದ್ಧವಾಗಿದೆ ಗೊತ್ತಾ ಪ್ರಧಾನಿ ಮೋದಿ, ಚಾಣಾಕ್ಷ ಅಮಿತ್ ಶಾ ಹೆಣೆದ ನಿಗೂಢ ವ್ಯೂಹ..? ಹೊಸ ಸಮೀಕ್ಷೆ ಅಗ್ನಿ ಪರೀಕ್ಷೆಯ ಸುಳಿವು ನೀಡಿದೆ ಅನ್ನೋ ಮಾತಿದೆಯಲ್ಲ, ಅದರ ಮರ್ಮವೇನು? ಅದೆಲ್ಲದರ ಪೂರ್ತಿ ಕತೆ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ‘ದಕ್ಷಿಣ’ ದಂಡಯಾತ್ರೆ..‘ಪೂರ್ವ’ ಸಿದ್ಧತೆ. ಮೋದಿ ಪಾಳಯ ಹೊರಟಿರೋ ದಕ್ಷಿಣ ದಂಡಯಾತ್ರೆಯ ಒಳಗುಟ್ಟು ತಕ್ಕಮಟ್ಟಿಗೆ ಅರ್ಥವಾಯ್ತು.
ಆದ್ರೆ, ಈ ಪೂರ್ವ ದಿಕ್ಕನ್ನ ದಕ್ಕಿಸಿಕೊಳ್ಳೋಕೆ, ಮೋದಿ ಸೇನೆ ಏನು ಮಾಡಲಿದೆ? ಅದೆಂಥಾ ಪದ್ಮವ್ಯೂಹ ರಚಿಸಿದೆ? ಅದೆಲ್ಲಕ್ಕಿಂತಾ ಮುಖ್ಯವಾಗಿ, ಸಮೀಕ್ಷೆ ಏನು ಹೇಳ್ತಾ ಇದೆ? ಮೋದಿ ಸೇನೆಯ ಮುಂದೆ ದೊಡ್ಡದೊಂದು ಸವಾಲಿದೆ.. 543 ಕ್ಷೇತ್ರಗಳಲ್ಲಿ 400 ಕ್ಷೇತ್ರಗಳನ್ನ ಗೆದ್ದೇ ಗೆಲ್ಲೋದಕ್ಕೆ ಮೋದಿ ಪಡೆ ಸನ್ನದ್ಧವಾಗಿದೆ.. ಹಾಗಾಗಿನೇ ಆ ನಂಬರ್ ರೀಚ್ ಮಾಡೋಕೆ, ದಕ್ಷಿಣ ದಂಡಯಾತ್ರೆ ನಡೆಸ್ತಾ ಇದೆ.. ಅಟ್ ಎ ಸೇಮ್ ಟೈಮ್, ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ತಾ ಇದೆ. ಭಾರತದ ಪೂರ್ವದಲ್ಲಿರೋ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದಿದೆ.