Dec 1, 2019, 4:27 PM IST
ಮಂಡ್ಯ (ಡಿ.01): ರಾಜ್ಯದಲ್ಲಿ ಡಿ. 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅನರ್ಹ ಶಾಸಕರಿಂದ ತೆರವಾಗಿರುವ ಎಲ್ಲ ಕ್ಷೇತ್ರಗಳೂ ಈ ಬಾರಿ ಪ್ರತಿಷ್ಠೆಯ ಕಣಗಳಾಗಿವೆ. ಕೆ.ಆರ್. ಪೇಟೆಯಲ್ಲಿ ನಮಗೆ ಬೆಂಬಲ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶಾಕ್ ಕೊಟ್ಟಿದ್ದಾರೆ.
ಸುಮಲತಾ ಅಂಬರೀಶ್ ಬೆಂಬಲ ಯಾವ ಪಕ್ಷಕ್ಕೆ ಎನ್ನುವುದು ತೀವ್ರ ಕುತೂಹಲ ಮೂಡಿಸಿತ್ತು. ಕೊನೆಗಳಿಗೆಯಲ್ಲಿ ಸುಮಲತಾ ಅಂಬರೀಶ್ ಅವರು ತಮ್ಮ ನಿಲುವನ್ನು ಪ್ರಕಟಿಸಿದ್ದು, ಸುಮಲತಾ ನಮ್ಮ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದ ಎರಡೂ ಪಕ್ಷಗಳ ಆಸೆಗೆ ತಣ್ಣೀರೆರಚಿದ್ದಾರೆ.
ಹಾಗಾದ್ರೆ ಉಪಚುನಾವಣೆ ಬಗ್ಗೆ ಸುಮಲತಾ ಏನು ಹೇಳಿದರು..? ಅವರ ಬಾಯಿಂದಲೇ ಕೇಳಿ.