ಚುನಾವಣೆ ಹೊಸ್ತಿಲಲ್ಲಿ ವಾಸ್ತು ಮೊರೆ ಹೋದ ಕಾಂಗ್ರೆಸ್‌, ಮೆಟ್ಟಿಲುಗಳ ಸಂಖ್ಯೆ ಹೆಚ್ಚಳ!

Dec 14, 2022, 6:09 PM IST

ಮಂಗಳೂರು (ಡಿ.14): ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಕಾಂಗ್ರೆಸ್‌ ಪಕ್ಷ ವಾಸ್ತು ಮೊರೆ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸಮಸಂಖ್ಯೆಯಲ್ಲಿದ್ದ ಮೆಟ್ಟಿಲುಗಳ ಸಂಖ್ಯೆಯನ್ನು ಬೆಸಸಂಖ್ಯೆಗೆ ಏರಿಸಲಾಗಿದೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯನ್ನು ನವೀಕರಣ ಮಾಡಲಾಗುತ್ತಿದೆ. ಇಲ್ಲಿಯವರೆಗೆ 8 ಮೆಟ್ಟಿಲುಗಳಿದ್ದ ಕಚೇರಿಯಲ್ಲೀಗ ವಾಸ್ತುತಜ್ಞರ ಸಲಹೆಯಂತೆ 9 ಸಂಖ್ಯೆಗೆ ಏರಿಸಲಾಗಿದೆ. ವಾಸ್ತು ಪ್ರಕಾರ 8 ಮೆಟ್ಟಿಲುಗಳಿದ್ದರೆ ದೋಷ ಎನ್ನುವ ಕಾರಣಕ್ಕಾಗಿ ಈ ಬದಲಾವಣೆ ಮಾಡಲಾಗಿದೆ.

2016ರಲ್ಲಿ ಈ ಜಿಲ್ಲಾ ಕಚೇರಿಯನ್ನು ಉದ್ಘಾಟನೆ ಮಾಡಲಾಗಿತ್ತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲು ಕಂಡಿತ್ತು. 2019ರಲ್ಲಿ ಇಲ್ಲಿ ನಡೆದ 8 ವಿಧಾನಸಭೆ ಸ್ಥಾನಗಳ ಪೈಕಿ 7ರಲ್ಲಿ ಪಕ್ಷ ಸೋಲು ಕಂಡಿತ್ತು.