3+2 ಅವರೇ ಮಾಡ್ತಿದ್ದಾರಾ ಬ್ಲಾಕ್ ಮೇಲ್..? ಸಿಎಂ ಮಾತ್ರ ಡೋಂಟ್ ಕೇರ್..!

Jan 15, 2021, 10:54 AM IST

ಬೆಂಗಳೂರು (ಜ. 15): ಕಳೆದರಡು ದಿನಗಳಿಂದ CD ವಿಚಾರ ರಾಜ್ಯ ರಾಜಕಿಯದಲ್ಲಿ ಸಂಚಲನ ಮೂಡಿಸುತ್ತಿದೆ. ಬಸನಗೌಡ ಪಾಟೀಲ್ ಸಿಡಿಸಿದ ಬಾಂಬ್‌ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಗ್ಗೆ ಸಿಎಂ ಮೌನ ಮುರಿದಿದ್ದಾರೆ. 

'ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಅತೃಪ್ತಿಗೊಂಡವರು ಬೇಕಿದ್ದರೆ ದೆಹಲಿ ವರಿಷ್ಠರಿಗೆ ದೂರು ನೀಡಲಿ. ಇಲ್ಲಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡುವುದು ಬೇಡ ಎಂದು ಬಿ.ಎಸ್‌. ಯಡಿಯೂರಪ್ಪ ಪಕ್ಷದ ಅಸಮಾಧಾನಿತ ಶಾಸಕರಿಗೆ  ಎಚ್ಚರಿಕೆ  ನೀಡಿದ್ದಾರೆ. ಅಲ್ಲದೆ, ಸಿ.ಡಿ. ಸೇರಿದಂತೆ ಯಾವುದೇ ವಿಚಾರಕ್ಕೂ ಹೆದರುವ ಅಗತ್ಯವೇ ಇಲ್ಲ ಎಂದು ಎದಿರೇಟು ನೀಡಿದ್ದಾರೆ.