Nov 14, 2019, 12:40 PM IST
ಬೆಂಗಳೂರು (ನ.14): ರಾಜ್ಯ ರಾಜಕೀಯದಲ್ಲಿ ಉಪ-ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಅನರ್ಹತೆ ಬಗ್ಗೆ ಸುಪ್ರೀಂ ತೀರಪು ನೀಡಿದ ಬೆನ್ನಲ್ಲೇ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ.
ಆದರೆ ಶಿವಾಜಿನಗರದ ಬಗ್ಗೆ ಬಿಜೆಪಿ ಇನ್ನೂ ತೀರ್ಮಾನ ಕೈಕೊಂಡಿಲ್ಲ. 7 ಬಾರಿ ಶಾಸಕರಾಗಿರುವ ರೋಷನ್ ಬೇಗ್ ಈಗಾಗಲೇ ಕಾಂಗ್ರೆಸ್ ತೊರೆದಿದ್ದು, ಬಿಜೆಪಿಗೆ ಸೇರಲು ಹವಣಿಸುತ್ತಿದ್ದಾರೆ. ಆದರೆ ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಈ ನಡುವೆ ಬಿಜೆಪಿಯ ಹಳೆಯ ರಾಜಕೀಯ ಕಿಲಾಡಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಖಾಡಕ್ಕೆ ಧುಮುಕಿದ್ದಾರೆ.
ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.