Dec 16, 2019, 7:27 PM IST
ಚಿಕ್ಕಬಳ್ಳಾಪುರ(ಡಿ. 16) ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡ ನೋವಿನಿಂದ ಹೊರ ಬರಲು ನಾಯಕರು ಹಾಡುಗಳ ಮೊರೆ ಹೋಗಿದ್ದಾರೆ. ತಬಲಾ- ವಾದ್ಯಗಳ ಹಾಡುಗಳಿಗೆ ನಾಯಕರು ಮನಸೋತಿದ್ದಾರೆ.
ಸುಧಾಕರ್ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಮೇಲೆ ಬಂಪರ್
ಕೈ ಮುಖಂಡ ಯಲುವಹಳ್ಳಿ ರಮೇಶ್ ಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಡುಗಳನ್ನು ಆಸ್ವಾದಿಸುವ ಮೂಲಕ ಸೋಲಿನ ನೋವು ಕಡಿಮೆ ಮಾಡಿಕೊಂಡೆವು ಎಂದು ಮುಖಂಡ ಯಲುವಹಳ್ಳಿ ರಮೇಶ್ ಹೇಳಿದರು.