ಕುಕ್ಕರ್, ಹಾಟ್ ಬಾಕ್ಸ್ ಆಯ್ತು ಈಗ ಧನಲಕ್ಷ್ಮೀ ಸರದಿ.. ಹೊರ ರಾಜ್ಯದಿಂದ ಬರ್ತಿದೆ ಕೋಟಿ ಕೋಟಿ ದುಡ್ಡು..!

Mar 25, 2023, 4:58 PM IST


ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದೆ ಇದರ ಮಧ್ಯೆ ಗಿಫ್ಟ್‌  ಆಮೀಷ ತೋರಿಸಿ  ವೋಟ್‌ ಪಡೆಯುವ ತಂತ್ರ ನಡೆಯುತ್ತಿದೆ. ಇಷ್ಟು ದಿನ ಕುಕ್ಕರ್, ಹಾಟ್ ಬಾಕ್ಸ್, ಸೀರೆ ಹೀಗೆ ನಾನಾ ವಸ್ತುಗಳನ್ನ ಕೊಟ್ಟು ವೋಟನ್ನ ಖರೀದಿಸಲು ಹೊರಟಿದ್ದ ಕೆಲವರು ಇಗ ಹಣವನ್ನು ಹಂಚಿ ವೋಟ್‌  ಪಡೆಯಲು ಮುಂದಾಗಿದ್ದಾರೆ. ಇನ್ನು ರಾಜ್ಯಕ್ಕೆ ಹೊರ ರಾಜ್ಯಗಳಿಂದ ಕೋಟಿ ಕೋಟಿ ದುಡ್ಡು ಬರುತ್ತಿದ್ದು,  ಸದ್ದಿಲ್ಲದೇ ಅದು ಡಿಸ್ಟ್ರಿಬ್ಯೂಟ್ ಆಗಿ ಮತದಾರರ ಕೈ ಸೇರುತ್ತಿದೆ. ಆದರೆ ಕೆಲವು ಹಣದ ಕಟ್ಟುಗಳು ಪೊಲೀಸರ ಕೈಗೆ ಸಿಕ್ಕಿದ್ದು, ಅಕ್ರಮ ಹಣಗಳನ್ನ ವಶಕ್ಕೆ ಪಡೆದಿದ್ದಾರೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹಣ ವಶವಾಗಿದೆ..? ಅದು ಯಾವ ಪಾರ್ಟಿಯ ದುಡ್ಡು..?  ಈ ವಿಡಿಯೋ ನೋಡಿ