Dec 3, 2022, 11:07 AM IST
ರಾಮನಗರದಲ್ಲಿ ಘಟಾನುಘಟಿ ನಾಯಕರ ನಡುವೆ ಫೈಟ್ ಏರ್ಪಟ್ಟಿದ್ದು, ಅಲ್ಲಿ ಒಕ್ಕಲಿಗ, ದಲಿತ ಹಾಗೂ ಮುಸ್ಲಿಂ ಮತಗಳೇ ನಿರ್ಣಾಯಕವಾಗಿವೆ. ಜೆಡಿಎಸ್'ನಿಂದ ಕುಮಾರಸ್ವಾಮಿ, ಕಾಂಗ್ರೆಸ್'ನಿಂದ ಡಿಕೆ ಶಿವಕುಮಾರ್ ಸಂಪೂರ್ಣ ಪ್ರಚಾರದ ಹೊಣೆಯನ್ನು ಹೊತ್ತು ಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ಮತ್ತೆ ಯೋಗೇಶ್ವರ ಕಣಕ್ಕೆ ಇಳಿಯಲಿದ್ದಾರೆ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್'ನಲ್ಲಿ ಎಂಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮಾಗಡಿ ಕೈ ಟಿಕೆಟ್ ಮೇಲೆ ರೇವಣ್ಣ, ಬಾಲಕೃಷ್ಣ ಕಣ್ಣಿಟ್ಟಿದ್ದು, ರಾಮನಗರದಲ್ಲಿ ಜೆಡಿಎಸ್'ನಿಂದ ನಿಖಿಲ್ ಸ್ಪರ್ಧಿಸುತ್ತಾರಾ?. ಇನ್ನು ಕೊನೆ ಕ್ಷಣದಲ್ಲಿ ಟಿಕೆಟ್ ಫೈಟ್ ಬದಲಾಗುವ ಸಾಧ್ಯತೆಯಿದೆ.