Dec 15, 2019, 7:52 PM IST
ಮಂಡ್ಯ(ಡಿ. 15) ದೇವೇಗೌಡರ ಕುಟುಂಬಕ್ಕೆ ಎಚ್ಚರಿಕೆ ಕೊಟ್ಟ ಬಹಳ ಜನ ಮಣ್ಣಾಗಿದ್ದಾರೆ. ಮೇಲಕ್ಕೆ ಮುಖ ಮಾಡಿ ಉಗಿದರೆ ಎಂಜಲು ಅವರ ಮುಖಕ್ಕೆ ಬೀಳುತ್ತದೆ ಎಂದು ಜೆಡಿಎಸ್ ನಾಯಕ ಪುಟ್ಟರಾಜು ಹೇಳಿದ್ದಾರೆ.
ಜೆಡಿಎಸ್ ನಿಂದ ಬಿಜೆಪಿಗೆ ಬಂದು ಕೆಆರ್ ಪೇಟೆ ಉಪಸಮರದಲ್ಲಿ ಗೆದ್ದಿರುವ ನಾರಾಯಣ ಗೌಡರ ಮೇಲೆ ವಾಗ್ದಾಳಿ ಮಾಡಿದ್ದಾರೆ. ನಾರಾಯಣ ಗೌಡ ಎಚ್.ಡಿ.ರೇವಣ್ಣ ಅವರ ಮೇಲೆ ವಾಗ್ದಾಳಿ ಮಾಡಿದ ನಂತರ ಕಿಚ್ಚು ಹೊತ್ತಿಕೊಂಡಿದೆ.