Apr 17, 2023, 11:39 PM IST
ಬೆಂಗಳೂರು (ಏ.17): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಾವು ಕಟ್ಟಿ ಬೆಳೆಸಿದ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ ಅಥವಾ ನಷ್ಟ ಆಗಲಿದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಇನ್ನು ಈಗಾಗಲೇ ಮುಖ್ಯಮಂತ್ರು ಹುದ್ದೆಗೆ ಕಾಂಗ್ರೆಸ್‌ನಲ್ಲಿ ಕಿತ್ತಾಟ ಮಾಡುತ್ತಿರುವ ನಾಯಕರ ನಡುವೆ ಮತ್ತೊಬ್ಬ ಪ್ರಬಲ ಸಮುದಾಯದ ನಾಯಕ ಬಂದಿರುವುದರಿಂದ ಕಿತ್ತಾಟ ಮತ್ತಷ್ಟು ದೊಡ್ಡದಾಗುವುದೇ ಎಂಬ ಅನುಮಾನವೂ ಕಾಡದೇ ಇರದು. ಆದರೆ, ಕಾಂಗ್ರೆಸ್‌ನಿಂದ ಎಲ್ಲ ಸ್ಥಾನ ಮಾನಗಳನ್ನೂ ಕೊಟ್ಟಿದ್ದರೂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಬಿ. ಸಿ ಪಾಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೇರಿ ಅನೇಕರು ಅಲ್ಲಿ ಅವರಿಗೆ ಯಾವ ಸ್ಥಾನಮಾನವೂ ಸಿಗುವುದಿಲ್ಲ ಎಂದು ಹೀಗಳೆದಿದ್ದಾರೆ.
ಹೀಗಿರುವಾಗ ಹುಬ್ಬಳ್ಳಿಯಲ್ಲಿ ಬಿಜೆಪಿಗೆ ಉಂಟಾಗಿರುವ ಡ್ಯಾಮೇಜ್ ತಡೆಗಟ್ಟಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿಗೆ ಆಗಮಿಸಿ ಲಿಂಗಾಯತ ನಾಯಕರು ಹಾಗೂ ವಿವಿಧ ಮಠಾಧಿಪತಿಗಳನ್ನು ಭೇಟಿ ಮಾಡಲಿದ್ದಾರೆ. ಒಟ್ಟಾರೆ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದರಿಂದ ಹುಬ್ಬಳ್ಳಿಯ ಬಿಜೆಪಿ ಕೋಟೆ ಗಢಗಢ ಅಲ್ಲಾಡುತ್ತಿದೆ.