Jan 11, 2021, 3:56 PM IST
ಬೆಂಗಳೂರು (ಜ. 11): ಸಂಪುಟ ವಿಸ್ತರಣೆ ಜ. 13 ಕ್ಕೆ ಅಧಿಕೃತವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವಾಕಾಂಕ್ಷಿಗಳ ಭರಾಟೆ ಜೋರಾಗಿದೆ. ಒಬ್ಬೊಬ್ಬರೇ ಹೇಳಿಕೆ ಕೊಡಲು ಶುರು ಮಾಡಿದ್ದಾರೆ.
ಮಂತ್ರಿಗಿರಿಗಾಗಿ ನಾನು ಲಾಬಿ ಮಾಡಿಲ್ಲ. ಮಾಡೋದು ಇಲ್ಲ. ನನಗೆ ಆಹ್ವಾನ ಬಂದ್ರೆ ಹೋಗ್ತೀನಿ. ನಸೀಬಿದ್ದರೆ ಮಂತ್ರಿ ಆಗ್ತೀನಿ. ಇಲ್ಲದಿದ್ದರೆ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸ್ತೀನಿ' ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.