ಸಿಎಂ ನಾಯಕತ್ವ ಬದಲಾವಣೆ; ಹೈಕಮಾಂಡ್‌ನಿಂದ ಬಂತು ಸ್ಪಷ್ಟ ಸಂದೇಶ

Dec 21, 2020, 12:30 PM IST

ಬೆಂಗಳೂರು (ಡಿ. 21): ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತೆ, ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿತ್ತು. ಇದಕ್ಕೆ ಬಿಜೆಪಿ ಹೈಕಮಾಂಡ್ ಸ್ಪಷ್ಟನೆ ನೀಡಿದೆ.

ಶಾ ತಂತ್ರದಿಂದ ದೀದಿ ಕೋಟೆಯಲ್ಲಿ ಮೊಳಗುತ್ತಾ ಕೇಸರಿ ಕಹಳೆ? ಬದಲಾಗುತ್ತಾ ಬಂಗಾಳ?

ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಬಿಎಸ್‌ವೈ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳಿಗೆ ನೀವೂ ಸಾಥ್ ನೀಡಿ ಎಂದು ದೂರು ಹೊತ್ತು ತರುವ ನಾಯಕರಿಗೆ ಹೈ ಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಅಲ್ಲಿಗೆ ಸಿಎಂ ಕುರ್ಚಿ ಸೇಫಾಗಿದೆ.