ನಮ್ಮ ನಾಯಕತ್ವ ಬಗ್ಗೆ ಮಾತಾಡ್ರಿ, ನಿಮ್ಮ ತಾಕತ್ತು ಒಪ್ತೀವಿ; ಸಿದ್ದುಗೆ ಎಚ್‌ಡಿಕೆ ಸವಾಲು

Dec 19, 2020, 3:14 PM IST

ಬೆಂಗಳೂರು (ಡಿ. 19): ಸಿದ್ದರಾಮಯ್ಯ ಹಾಗೂ ಎಚ್‌ಡಿಕೆ ನಡುವೆ ರಾಜಕೀಯ ಟಾಕ್ ವಾರ್ ಮುಂದುವರೆದಿದೆ. ಸಿದ್ದರಾಮಯ್ಯ ಆರೋಪಕ್ಕೆ ಎಚ್‌ಡಿಕೆ ಟಾಂಗ್ ನೀಡಿದ್ದಾರೆ. 

'ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ. ಇನ್ನೆಂದು ಜೆಡಿಎಸ್‌ನ ಸ್ಥಾನ ಗಳಿಕೆ ಬಗ್ಗೆ ಲಘುವಾಗಿ ಮಾತಾಡಬೇಡಿ. ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಲು ಬೇಕಿರುವ ನಾಯಕತ್ವ, ಅದು ಬೇಡುವ ಶ್ರಮದ ಬಗ್ಗೆ ನಿಮಗೆ ಅರಿವಿಲ್ಲ. ನಿಮಗೆ ಅದು ಸಾಧ್ಯವೂ ಇಲ್ಲ' ಎಂದಿದ್ದಾರೆ.

ಕಾಂಗ್ರೆಸ್‌ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಟಕ್ಕರ್ ಕೊಟ್ಟ ಟಗರು ಸಿದ್ದು; ಕೈ ಪಾಳಯಕ್ಕೆ ಬಿತ್ತು ಗುದ್ದು!