ಹೊಸ ಅಧ್ಯಾಯ ಆರಂಭವೆಂದ ಡಿಕೆಶಿ..! ಸೋಲಿನ ಸೇಡು..ಚನ್ನಪಟ್ಟಣ ಚದುರಂಗದಾಟಕ್ಕೆ ಡಿಸಿಎಂ ಎಂಟ್ರಿ..?

Jun 26, 2024, 5:52 PM IST

ಸೋದರನ ಸೋಲು ದಳಪತಿ ವಿರುದ್ಧದ ಸೇಡು. ಇದ್ರ ಪರಿಣಾಮವೇ ಚನ್ನಪಟ್ಟಣ ಬೈಎಲೆಕ್ಷನ್(Channapatna By poll election) ಬ್ಯಾಟಲ್ ರಣರೋಚಕವಾಗಿದೆ. ಕುಮಾರಸ್ವಾಮಿಯಿಂದ(HD Kumaraswamy) ತೆರವಾದ ಸ್ಥಾನ ಗೆಲ್ಲುವುದು ಜೆಡಿಎಸ್(JDS), ಬಿಜೆಪಿಗೆ(BJP) ಪ್ರತಿಷ್ಠೆಯಾದ್ರೆ. ಡಿ.ಕೆ ಬ್ರದರ್ಸ್‌ಗೆ ಸೋಲಿನ ಸೇಡು ತೀರಿಸಿಕೊಳ್ಳುವ ಬಿಗ್ ಚಾಲೆಂಜ್ ಆಗಿದೆ. ಹೀಗಾಗಿ ಮೈತ್ರಿ ಕದನ ಕಲಿಗೆ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಡಿಕೆ ಬ್ರದರ್ಸ್ ಹುಡುಕಾಡ್ತಿದ್ರು. ಇದೀಗ ಎಲ್ಲ ಲೆಕ್ಕಾಚಾರ ಹಾಕಿರೋ ಡಿಕೆಶಿ (DK Shivakumar), ಚನ್ನಪಟ್ಟಣ ಗೆಲ್ಲಲು ತಾವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತಿದೆ. ಲೋಕಸಭೆ ಚುನಾವಣೆಯ ಬಳಿಕೆ ಇದೀಗ ಉಪಚುನಾವಣೆ ರಾಜ್ಯ ರಾಜಕೀಯಕ್ಕೆ ಮತ್ತೆ ರಂಗು ತುಂಬುತ್ತಿದೆ. 3 ವಿಧಾನಸಭೆ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪಚುನಾವಣೆಗೆ ಸಜ್ಜಾಗಿವೆ. ಆದ್ರೆ ಈ ಉಪಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಕುತೂಹಲ ಕೆರಳಿಸಿರೋ ಕ್ಷೇತ್ರ ಅಂದ್ರೆ ಅದು ಚನ್ನಪಟ್ಟಣ ಅಖಾಡ. ಎಚ್.ಡಿ ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ರೀಂದ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಚ್ಡಿಕೆ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರ ಸದ್ಯ ಒಕ್ಕಲಿಗ ನಾಯಕರ ಬಲಾಬಲ ಪರೀಕ್ಷೆಗೆ ವೇದಿಕೆಯಾಗುವ ಲಕ್ಷಣಗಳು ನಿಚ್ಚಳವಾಗಿವೆ. ಯಾಕಂದ್ರೆ ಚನ್ನಪಟ್ಟಣದ ಮೇಲೆ ಡಿಕೆಶಿವಕುಮಾರ್ ಕಣ್ಣಿಟ್ಟಿದ್ದಾರೆ. ಚನ್ನಪಟ್ಟಣ ನನ್ನ ಹೃದಯ ಅಂತಿದ್ದಾರೆ ಡಿಕೆಶಿ. ಇದು ನನಗೆ ರಾಜಕೀಯ ಜನ್ಮಕೊಟ್ಟ ಕ್ಷೇತ್ರ ಅಂತಿದ್ದಾರೆ ಕನಕಾಧಿಪತಿ. ಆ ಮೂಲಕ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಲು ಮುಂದಾಗಿದ್ದಾರೆ. ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ:  ಬೂದಿ ಮುಚ್ಚಿದ ಕೆಂಡವನ್ನು ಮತ್ತೆ ಕೆದಕಿದ್ದೇಕೆ ಸಿದ್ದು ಸೈನ್ಯ..? ದಂಡು ಕಟ್ಟಿದ ಶಾಸಕರಿಂದ ದೆಹಲಿ ದಂಡಯಾತ್ರೆ..!