Dec 11, 2021, 10:37 AM IST
ಬೀದರ್(ಡಿ.11): ಬೀಗರ ನಡುವೆ ನಡೆದಂತೆ ವಿಧಾನ ಪರಿಷತ್ ಚುನಾವಣೆ ಅಖಾಡದಲ್ಲಿ ದೊಡ್ಡ ಹೈಡ್ರಾಮ ನಡೆದ ಘಟನೆ ನಿನ್ನೆ(ಶುಕ್ರವಾರ) ಬೀದರ್ನಲ್ಲಿ ನಡೆದಿದೆ. ಸಚಿವ ಪ್ರಭು ಚೌವ್ಹಾಣ್ ಅವರು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಸಚಿವ ಚೌವ್ಹಾಣ್ ಅವರ ಬೆನ್ನುಬಿಡದೆ ಹಿಂಬಾಲಿಸಿದ್ದಾರೆ. ಈ ವೇಳೆ ಎಲ್ಲಿ ಹೋದರೂ ಕಾರ್ಯಕರ್ತರ ಪರಸ್ಪರ ಘೋಷಣೆ, ಮಾತಿನ ಚಕಮಕಿ, ಗಲಾಟೆಗಳು ನಡೆದಿವೆ.
Minister on queue:ವಿಮಾನ ಹತ್ತಲು ಕ್ಯೂನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರಳತೆಗೆ ಜನರ ಮೆಚ್ಚುಗೆ
ಜಿಲ್ಲೆಯ ಔರಾದ್ ತಾಲೂಕಿನ ಮುಕಿ ಗ್ರಾಮದಲ್ಲಿ ಸಚಿವ ಪ್ರಭು ಚೌವ್ಹಾಣ್ ಕಾರ್ಯಕರ್ತರ ಭೇಟಿ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾ ಸೃಷ್ಟಿಸಿದ್ದರು. ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ನೋಡಿ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬೀಮಾರಾವ್ ಪಾಟೀಲ್ ಬೆಂಬಲಿಗರ ಕಾರಿನಲ್ಲಿ ಮದ್ಯದ ಬಾಟಲ್, ಲಾಠಿ ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿವೆ.