Loksabha Eection: ಯಾವ ಪಕ್ಷವನ್ನೂ ಬಿಟ್ಟಿಲ್ಲ ಸಕುಟುಂಬ ರಾಜಕಾರಣ: ಕುಟುಂಬ ರಾಜಕೀಯ ಯಾರು ಹೆಚ್ಚು..ಯಾರು ಕಡಿಮೆ..?

Mar 23, 2024, 5:37 PM IST

ಲೋಕಸಭಾ ಚುಣಾವಣೆಗೆ ದಿನಾಂಕ ನಿಗದಿಯಾಗಿದೆ. ರಾಜಕೀಯ ಪಕ್ಷಗಳ ತಯಾರಿ ಕೂಡ ಜೋರಾಗಿದೆ. ಈ ಲೋಕಸಭೆ(Loksabha) ಚುನಾವಣೆಯನ್ನು ರಾಜ್ಯದ ದೃಷ್ಟಿಯಿಂದ ನೋಡಿದರೆ ಕುಟುಂಬ ರಾಜಕಾರಣವೇ(Family politics) ಕಾಣುತ್ತಿದೆ. ಪ್ರಮುಖ ಮೂರು ಪಕ್ಷಗಳು ಈ ಬಾರಿ ಸಹಕುಟುಂಬ ಸಮೇತವಾಗಿ ರಾಜಕೀಯ ಅಖಾಡಕ್ಕೆ ಇಳಿದಂತಿದೆ. ದೇಶದಲ್ಲಿ ಏಪ್ರಿಲ್ 19 ರಿಂದ ಜೂನ್ 1ರ ವರೆಗೂ ಏಳು ಹಂತದ ಮತದಾನ(Voting) ನಡೆಯಲಿದೆ. ಇದರ ನಂತರ ಜೂನ್ 4ರಂದು ಫಲಿತಾಂಶ ಹೊರ ಬೀಳಲಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ದಕ್ಷಿಣ ಕರ್ಣಾಟಕ(Karnataka) ಭಾಗದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಹಾಗೆನೇ ಎರಡನೇ ಹಂತದ ಮತದಾನ ಮೇ 7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯನ್ನು ರಾಜ್ಯ ರಾಜಕಾರಣ ದೃಷ್ಟಿಯಿಂದ ನೋಡುವುದಾದ್ರೆ, ಈ ಬಾರಿ ಸಹ ಕುಟುಂಬ ರಾಜಕಾರಣಂ ಅನ್ನುವಂತಾಗಿದೆ. ಯಾಕೆಂದ್ರೆ, ಈ ಲೋಕಸಭಾ ಚುನಾವಣೆಗೆ ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳು, ಸಹ ಕುಟುಂಬ ಸಮೇತವಾಗಿ ಚುನಾವಣಾ ಅಖಾಡಕ್ಕೆ ಇಳಿಯುತ್ತಿವೆ. ರಾಜ್ಯದಲ್ಲಿರುವ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ, ಎಲ್ಲಿ ನೋಡಿದರಲ್ಲಿ ರಕ್ತ ಸಂಬಂಧಿಗಳ ಹೋರಾಟವೇ ಕಾಣಿಸುತ್ತಿದೆ. 

ಇದನ್ನೂ ವೀಕ್ಷಿಸಿ:  ಕೇಜ್ರಿವಾಲ್ ಸರ್ಕಾರದ ಅಬಕಾರಿ ನೀತಿಯಿಂದ ಆಗಿದ್ದೇನು..? ಮದ್ಯ ನೀತಿ ಹಗರಣ..! ನೂರೆಂಟು ನಿಗೂಢ ರಹಸ್ಯಗಳು!