Mar 22, 2024, 5:37 PM IST
ಲೋಕಸಭಾ ಚುನಾವಣೆಯ ಕಾವು ಕರ್ನಾಟಕದಲ್ಲಿ ದಿನೇ ದಿನೇ ಏರಿಕೆ ಆಗ್ತಾನೇ ಇದೆ. ಪ್ರತಿ ಕ್ಷೇತ್ರಗಳಲ್ಲೂ ಕೂಡ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರಾಜ್ಯದಲ್ಲಿ ಪ್ರಮುಖವಾಗಿ ನಾಲ್ಕು ಕ್ಷೇತ್ರಗಳು ಭಾರಿ ಸಂಚಲನ ಸೃಷ್ಟಿಸಿದೆ. ಅದರಲ್ಲಿ ಎರಡು ಕ್ಷೇತ್ರಗಳಿಗೆ ಬಿಜೆಪಿ(BJP) ಅಭ್ಯರ್ಥಿ ಘೋಷಣೆ ಮಾಡದೇ ಇದ್ರೂ ಹೈವೋಲ್ಟೇಜ್ ಬಿಸಿ ಕಂಡು ಬರ್ತಾ ಇದೆ. ರಾಜ್ಯದಲ್ಲೂ ಕಾಂಗ್ರೆಸ್(Congress) ಹಾಗೂ ಬಿಜೆಪಿ ಗೆಲುವಿಗಾಗಿ ತಂತ್ರ ಪ್ರತಿತಂತ್ರ ಹಣೆಯೋಕೆ ಸಿದ್ಧವಾಗಿದೆ. ಜೆಡಿಎಸ್ ಮೈತ್ರಿ ಮಂತ್ರವನ್ನ ಪಠಿಸುತ್ತಾ ಬಿಜೆಪಿ ಜೊತೆಯಲ್ಲಿ ನಿಂತಿದೆ. ಇದೇ ಹೊತ್ತಲ್ಲಿ ಕಾಂಗ್ರೆಸ್ಸಿನ ಏಕಮಾತ್ರ ಸಂಸದ ಡಿಕೆ ಸುರೇಶ್(DK Suresh) ಅವರನ್ನ ಸೋಲಿಸೋಕೆ ಮೈತ್ರಿ ಮಂಡಳದಿಂದ ಹೊಸ ಅಭ್ಯರ್ಥಿ ಬಂದಿದ್ದಾರೆ. ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ, ಅವರೇ ಖ್ಯಾತ ಹೃದ್ಯೋಗ ತಜ್ಞ ಡಾ ಮಂಜುನಾಥ್. ಬೆಂಗಳೂರು ಗ್ರಾಮಾಂತರ(Bengaluru rural) ಅಂದ್ರೆ ಅದು ಡಿಕೆ ಸುರೇಶ್ ಭದ್ರಕೋಟೆ. ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆಯನ್ನ ಮಾಡಿದ್ದರು. 2019 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭಾ ಎಲೆಕ್ಷನ್ನಿನಲ್ಲಿ ಹೀನಾಯವ ಪ್ರದರ್ಶನ ನೀಡಿತ್ತು. ಆಗ ಜೆಡಿಎಸ್ ಜೊತೆ ಕಾಂಗ್ರೆಸ್ಸಿನ ಸಖ್ಯವಿತ್ತು. ಮೈತ್ರಿ ಅಭ್ಯರ್ಥಿಗಳು ಮೋದಿ ನಾಮದ ಎದುರು ಹೋರಾಡೋಕೆ ಆಗಲೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ್ ಒಬ್ಬರೇ ಗೆದ್ದವರು. ಈಗ ಆ ಏಕೈಕ ಸಂಸದನನ್ನ ಸೋಲಿಸೋಕೆ ಬಿಜೆಪಿ ಜೆಡಿಎಸ್ ಪಕ್ಷ ವೈದ್ಯವ್ಯೂಹವನ್ನ ರಚಿಸಿದೆ.
ಇದನ್ನೂ ವೀಕ್ಷಿಸಿ: Watch Video: ಆಕಾಂಕ್ಷಿಗಳಲ್ಲಿರೋದು ಆಕ್ರೋಶವೋ..? ಅಸಮಾಧಾನವೋ..? ಅತೃಪ್ತರಿಂದ ಎದುರಾಗೋದು ಬಂಡಾಯವೋ..? ದಂಗೆಯೋ..?