Jan 7, 2025, 4:17 PM IST
ಉಳಿಸಿಕೊಳ್ಳೋರು..ಉರುಳಿಸೋರು..ಆರಂಭ ಅಂತರ್ಯುದ್ಧ.. ಡಿಕೆ ಶರವೇಗಕ್ಕೆ ಸಿದ್ದು ಪಡೆಯ ಸ್ಪೀಡ್ ಬ್ರೇಕರ್..ಮಹಾರಾಜ..ಸಿಂಹಾಸನ...ಸೇನಾಧ್ಯಕ್ಷ.. ಸಿಪಾಯಿ..ಏನಿದು ಕೈ ಲಡಾಯಿ..? ‘ಆ’ ದಿನದ ಆಟ..‘ಆ‘ ಗಡುವು..ಪ್ರಚಂಡ ದಾಳದ ಕಥೆ.. ಒಗ್ಗಟ್ಟಿನ ಮನೆಯಲ್ಲಿ ಪಟ್ಟಕ್ಕಾಗಿ ಶುರುವಾಗಿದೆ ಒಳಬೇಗುದಿ.. ಸಿದ್ದು ಪಡೆ ಸಿದ್ಧವಾಗಿಸಿ ಇಟ್ಕೊಂಡಿದೆ ಎರಡು ಪ್ಲಾನ್.. ಡಿನ್ನರ್ ಪಾಲಿಟಿಕ್ಸ್ನಿಂದ ಎಚ್ಚೆತ್ತುಕೊಂಡ್ರಾ ಡಿಸಿಎಂ..? ಡಿಕೆ ದೆಹಲಿ ಭೇಟಿ ರಾಜ್ಯ ಕಾಂಗ್ರೆಸ್ನಲ್ಲಿ ಹತ್ತಾರು ಚರ್ಚೆ.. ಡಿಕೆಶಿಗೆ ಸಿಎಂ ಪಟ್ಟವೆಂದ ಬಿಜೆಪಿ ಸಂಸದ. ಇದೆಲ್ಲದ್ರ ಮಧ್ಯೆ, ವಿದೇಶದಿಂದ ಬರ್ತಾ ಇದ್ದಂತೆ ಡಿ.ಕೆ.ಶಿವಕುಮಾರ್ ಸೀದಾ ದೆಹಲಿಗೆ ಹೊಗಿದ್ದಾರೆ. ಅಷ್ಟಕ್ಕೂ ಡಿಕೆ ದೆಹಲಿಗೆ ಹೋಗಿದ್ಯಾಕೆ..? ಹೈಕಮಾಂಡೇ ಕರೆಸಿಕೊಳ್ತಾ.? ಅಥವಾ ಇವರೇ ಮುದ್ದಾಂ ಹೋಗಿದ್ದಾ..? ಡಿಕೆ ಹೊಸ ಆಟದ ಆ ಸ್ಟೋರಿಯನ್ನ ನೋಡೋಣ.
ಸಿದ್ದರಾಮಯ್ಯ ಅವರ ಬಣ ಸಭೆ ಮೂಲಕ ಸೈಲೆಂಟ್ ಆಗಿ ಮುಂದೆ ಎದುರಾಗಬಹುದಾದ ಅಂತರ್ಯುದ್ಧಕ್ಕೆ ತಯಾರಿ ನಡೆಸಿದೆ. ಅದು ಕೂಡ ಡಿ.ಕೆ.ಶಿವಕುಮಾರ್ ಅವರು ಇಲ್ಲದ ಹೊತ್ತಲ್ಲಿ. ಈಗ ಕಹಾನಿ ಮೆ ಟ್ವಿಸ್ಟ್ ಅನ್ನೋ ಹಾಗೆ ಡಿ.ಕೆ.ಶಿವಕುಮಾರ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಕಾಂಗ್ರೆಸ್ ಕೋಟೆಯೊಳಗೆ ಹೊತ್ತಿಕೊಂಡಿರೋ ಈ ಕಿಚ್ಚಿಗೆ ಬೆಂಕಿ ಸುರಿಯುವ ಕೆಲಸವನ್ನ ಮೈತ್ರಿ ಕೂಟ ಮಾಡ್ತಿದ್ಯಾ..? ಇಂಥಹದೊಂದು ಚರ್ಚೆಗೆ ಕಾರಣವಾಗಿರೋದು ಜೆಡಿಎಸ್ ಶಾಸಕ ಹಾಗೂ ಬಿಜೆಪಿ ಸಂಸದರೊಬ್ಬರ ಹೇಳಿಕೆಯಾಗಿದೆ. ಸದ್ಯ ಡಿಕೆ ದೆಹಲಿಗೆ ಹೋಗಿದ್ದಾರೆ. ಪಕ್ಷದೊಳಗೆ ಎದ್ದಿರುವ ಈ ಸುಂಟರಗಾಳಿಯನ್ನ ತಣಿಸೋಕೆ ಹೈಕಮಾಂಡ್ ಏನಾದ್ರೂ ಎಂಟ್ರಿ ಕೊಡುತ್ತಾ..? ಕಾದು ನೋಡ್ಬೇಕು. ಇಲ್ಲವಾದ್ರೆ, ಗುಪ್ತಗುಪ್ತವಾಗಿ ನಡೆಯುತ್ತಾ ಇರೋ ಈ ಗುದ್ದಾಟ.. ಬಹಿರಂಗವಾಗಿ ಶುರುವಾದ್ರೂ ಅಚ್ಚರಿಯಿಲ್ಲ.