'ಹಿಜಾಬ್ ವಿವಾದ: ರಾಮ ಮಂದಿರ ತೀರ್ಪು ಸ್ವಾಗತಿಸಿದಂತೆ ಸ್ವಾಗತಿಸುತ್ತೇವೆ'

Feb 13, 2022, 5:13 PM IST

ಹುಬ್ಬಳ್ಳಿ ,(ಫೆ.13): ಹಿಂದೂ-ಮುಸ್ಲಿಂ ಅಂತ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿಯವರು ಕೆಲಸದ ಆಧಾರದ ಮೇಲೆ ಮತ ಕೇಳಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಲೇವಡಿ ಮಾಡಿದ್ದಾರೆ.

ಹಿಜಾಬ್, ಕೇಸರಿ ಶಾಲು ವಿವಾದ, ಸಿದ್ದಗಂಗಾ ಮಠಕ್ಕೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಭೇಟಿ

ಹುಬ್ಬಳ್ಳಿ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಹಿಜಾಬ್ ತೀರ್ಪು ಏನೇ ಬಂದ್ರೂ ಒಮ್ಮತದಿಂದ ಒಪ್ಪಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.