Jun 30, 2023, 11:32 PM IST
ಕಾಂಗ್ರೆಸ್ ಉಚಿತ ಗ್ಯಾರೆಂಟಿಗಳ ಪೈಕಿ 2 ಯೋಜನೆ ನಾಳೆಯಿಂದ ಜಾರಿಯಾಗುತ್ತಿದೆ. 5 ಕೆಜಿ ಉಚಿತ ಅಕ್ಕಿ ಹಾಗೂ ಉಚಿತ ವಿದ್ಯುತ್ ಯೋಜನೆ ನಾಳೆಯಿಂದ ಜಾರಿಯಾಗುತ್ತಿದೆ. ಸದ್ಯಕ್ಕೆ ಅಕ್ಕಿ ಇಲ್ಲದ ಕಾರಣ ಪ್ರತಿ ಕೇಜಿಗೆ 34 ರೂಪಾಯಿಯಂತೆ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಗೃಹ ಜ್ಯೋಜಿ ಉಚಿತ ಯೋಜನೆ ನಾಳೆಯಿಂದ ಜಾರಿಯಾಗಲಿದೆ. ಪ್ರತಿ ಮನೆಗೆ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆ ಲಾಭ ಪಡೆಯಲು ಜುಲೈ 15ಕ್ಕೆ ಅಂತಿಮ ದಿನವಾಗಿದೆ.ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದಂತೆ ನೀಡುತ್ತಿಲ್ಲ ಎಂದು ಬಿಜೆಪಿ ಹೇಳಿದೆ. ಇದೀಗ ಸದನದ ಹೊರಗೆ ಹಾಗೂ ಒಳಗೆ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.