Mar 29, 2024, 5:42 PM IST
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಒಕ್ಕಲಿಗರ ಸಂಖ್ಯೆ ಹೆಚ್ಚಿರೋ ಕ್ಷೇತ್ರವಾಗಿರೋ ಕ್ಷೇತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ(Loksabha) ಕಾಂಗ್ರೆಸ್ ಗೆದ್ದಿದ್ದ ಒಂದೇ ಒಂದು ಕ್ಷೇತ್ರ ಅಂದ್ರೆ ಅದು ಬೆಂಗಳೂರು ಗ್ರಾಮಾಂತರ(Bengaluru rural). ಆದ್ರೆ ಈ ಸರ್ತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದಲ್ಲೇ ಅತ್ಯಂತ ಪ್ರತಿಷ್ಠೆಯ ಕದನಕಣವಾಗಿದೆ. ಕಾರಣ ಈ ಕ್ಷೇತ್ರ 2 ಪ್ರತಿಷ್ಠಿತ ಮನೆತಗಳ ಮಧ್ಯೆ ನಡೀತಿರೀ ಕುರುಕ್ಷೇತ್ರ ಯುದ್ಧವಾಗಿದೆ. ಡಿಕೆ ಸುರೇಶ್(DK suresh) ವಿರುದ್ಧ ಬಿಜೆಪಿ ಜೆಡಿಎಸ್ ದೋಸ್ತಿ ಅಭ್ಯರ್ಥಿ ಡಾ. ಮಂಜುನಾಥ್(CN Manjunath) ಸ್ಪರ್ಧೆ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ದೇಶದ ಅತಿ ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಒಂದು. ಕನಕಪುರದಿಂದ ಕುಣಿಗಲ್ ತನಕ.ಚನ್ನಪಟ್ಟಣದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ತನಕ. ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡಿರುವ ದೈತ್ಯ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಅಷ್ಟೇ ಅಲ್ಲ ಈ ಬಾರಿ ಇಡಿ ದೇಶದಲ್ಲಿ ಅತ್ಯಂತ ಜಿದ್ದಾಜಿದ್ದಿನ ಹೈವೋಲ್ಟೆಜ್ ಕ್ಷೇತ್ರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಯಾಕಂದ್ರೆ.. ಬೆಂಗಳೂರು ಗ್ರಾಮಾಂತರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಹಾಲಿ ಸಂಸದ ಡಿಕೆ ಸುರೇಶ್ ಗೆ ಎದುರಾಳಿಯಾಗಿರೋದು. ಬಿಜೆಪಿ ಜೆಡಿಎಸ್ ದೋಸ್ತಿ ಅಭ್ಯರ್ಥಿ ಡಾಕ್ಟರ್ ಸಿಎನ್ ಮಂಜುನಾಥ್.
ಇದನ್ನೂ ವೀಕ್ಷಿಸಿ: ಅನಾಹುತ ಮಾಡಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ..! ಆನೆಯ ಮೇಲೆ ಕುಳಿತು ಆ ಹಳ್ಳಿಗೆ ಇಂದಿರಾ ಬಂದದ್ದೇಕೆ..?