Dec 9, 2019, 5:52 PM IST
ಚಿಕ್ಕಮಗಳೂರು (ಡಿ.09): ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಮಂತ್ರಿಗಿರಿಯ ಲೆಕ್ಕಾಚಾರಗಳು ಗರಿಗೆದರಿವೆ. ಕಾಂಗ್ರೆಸ್-ಜೆಡಿಎಸ್‌ನಿಂದ ವಲಸೆ ಬಂದು ಗೆದ್ದವರ ಜೊತೆಗೆ ಹಲವಾರು ಮೂಲ ಬಿಜೆಪಿಗರು ಕೂಡಾ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಕೂಡಾ ತಾನು ಮಂತ್ರಿ ಸ್ಥಾನದ ಆಕಾಂಕ್ಷಿಯೆಂದು ಬಹಿರಂಗವಾಗಿ ಹೇಳಿಕೊಂಡು ಬಂದಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಅದೇ ಮಾತನ್ನು ಮತ್ತೆ ಪುನಾರವರ್ತಿಸಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...
ಡಿ.05ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇಂದು (ಸೋಮವಾರ) ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ-12, ಕಾಂಗ್ರೆಸ್ -2, ಪಕ್ಷೇತರ -1 ಸ್ಥಾನಗಳನ್ನು ಗಳಿಸಿದ್ದಾರೆ.