ರಾಜಾಹುಲಿ ಬಿಎಸ್‌ವೈ ಸಿಎಂ ಪಟ್ಟ ಗಟ್ಟಿ ಮಾಡಿಕೊಂಡಿದ್ಹೇಗೆ..?

Jan 12, 2021, 12:17 PM IST

ಬೆಂಗಳೂರು (ಜ. 12): ಸಿಎಂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಮಬ ಮಾತು ಕೇಳಿ ಬಂದಿದೆ. ನಾಯಕತ್ವ ಬದಲಾವಣೆ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಿತ್ತು. ಈ ಬಾರಿ ಸಂಪುಟ ಕಸರತ್ತಿನಲ್ಲಿ ಬಾರೀ ಬದಲಾವಣೆಯನ್ನೂ ನಿರೀಕ್ಷಿಸಲಾಗಿತ್ತು. ಸಿಎಂ ದೆಹಲಿ ಭೇಟಿ ಬಳಿಕ ಅವೆಲ್ಲಾ  ಸುಳ್ಳಾಗಿದೆ. ಜ. 13 ಕ್ಕೆ ಸಂಪುಟ ವಿಸ್ತರಣೆ ನಿಗದಿಯಾಗಿದೆ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಒಲವು ತೋರಿಲ್ಲದಿರುವುದು ವಿಪಕ್ಷಗಳಿಗೆ ಹಿನ್ನಡೆಯಾಗಿದೆ. 

ಕೇಂದ್ರ ಸಚಿವರ ಕಾರು ಅಪಘಾತ to ಕೃಷಿ ಕಾಯ್ದೆ ಕುರಿತು ಸುಪ್ರೀಂ ಪ್ರಶ್ನೆ : ಸಂಪೂರ್ಣ ಸುದ್ದಿ!

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತೇವೆ ಎಂದು ಆರ್‌ಎಸ್‌ಎಸ್‌ನವರೇ ನನಗೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇನ್ನು ಬಿಜೆಪಿ ಶಾಸಕ ಯತ್ನಾಳ್ ಸಂಕ್ರಾಂತಿ ಬಳಿಕ ರಾಜಕೀಯ ಬದಲಾವಣೆ ಆಗುತ್ತೆ ಎಂದಿದ್ದರು. ಇವೆಲ್ಲಾ ಭಾರೀ ಕುತೂಹಲ ಮೂಡಿಸಿತ್ತು. ಹಾಗಾದರೆ  ರಾಜಾಹುಲಿ ಪಟ್ಟವನ್ನು ಗಟ್ಟಿ ಮಾಡಿಕೊಮಡಿದ್ಹೇಗೆ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!