Feb 26, 2022, 5:33 PM IST
ಬೆಳಗಾವಿ, (ಫೆ.26): ಕರ್ನಾಟಕ ವಿಧಾಣಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಆಗಲೇ ರಾಜಕೀಯ ಪಕ್ಷಗಳ ಸಕಲ ತಯಾರಿ ನಡೆಸಿದ್ದಾರೆ.
Karnataka Congress: ರಾಹುಲ್ ಭೇಟಿ ಬಳಿಕ ಸಿದ್ದು, ಡಿಕೆಶಿ ಒಗ್ಗಟ್ಟು ಪ್ರದರ್ಶನ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸಂಘಟನೆ ತೊಡಗಿದ್ದು, ನಾವೇ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ಮೂರು ಪಕ್ಷಗಳು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿವೆ. ಇನ್ನು ಈ ಬಗ್ಗೆ ಸಚಿವ ಗೋವಿಂದ್ ಕಾರಜೋಳ ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬರೆದಿಟ್ಟುಕೊಳ್ಳಿ ಇವತ್ತೆ ನನ್ನ ಹೆಸರು ಗೋವಿಂದ ಕಾರಜೋಳ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಗಿದು ಹೋದ ಪಾರ್ಟಿ, ಅಲ್ಲೊಂದು ಇಲ್ಲೊಂದು ಕಾಂಗ್ರೆಸ್ ಪುಡಾರಿಗಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರುತ್ತೆ, 2024ಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಅಭಿಪಾಯ ವ್ಯಕ್ತಪಡಿಸಿದರು.