ಬಿಜೆಪಿ ಟಾರ್ಗೆಟ್ 150 ಮುಟ್ಟೋಕೆ ಮೋದಿ ಅಸ್ತ್ರ ಪ್ರಯೋಗ!

Feb 14, 2023, 6:58 PM IST

ಬೆಂಗಳೂರು (ಫೆ.14): ಕರ್ನಾಟಕದಲ್ಲಿ ಪ್ರಧಾನಿ ಮೋದಿ ವಿಹಾರ ನಡೆಸುತ್ತಿದ್ದರೆ, ಕಮಲ ಪಡೆ ಖುಷ್ ಆಗಿದೆ. ಇನ್ನೊಂದ್ ಕಡೆ ಕೈ ಪಾಳಯಕ್ಕೆ ಶಾಕ್ ಆಗುತ್ತಿದೆ. ಕೇಸರಿ ಪಾಳಯವೇನೋ ತನ್ನ ಟಾರ್ಗೆಟ್ 150 ಅಂತ ಫಿಕ್ಸ್ ಆಗಿದೆ. ಆ ಟಾರ್ಗೆಟ್ ಮುಟ್ಟೋಕೆ ಮೋದಿ ಆರ್ಭಟಿಸುತ್ತಿದ್ದಾರೆ. ಅದನ್ನ ನೋಡಿದ ವಿಪಕ್ಷಗಳ ಪರಿಪರಿಯಾಗಿ ರಿಯಾಕ್ಷನ್‌ ನೀಡುತ್ತಿದೆ. ಹಳೆ ಮೈಸೂರು ಪ್ರಾಂತ್ಯ ಮೋದಿ ಅಶ್ವಮೇಧಕ್ಕೆ ಕೈ ಹಿಡಿಯುತ್ತಾ ಅನ್ನೋದೇ ಮೊದಲ ಪ್ರಶ್ನೆಯಾಗಿ ಕಾಡಿದ್ದರೆ, ಅದರ ಜೊತೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಬಗ್ಗೆಯೂ ಕುತೂಹಲವಿದೆ. ಈ ನಡುವೆ ಕೈ ಬಲಗೊಳಿಸಲು ರಾಹುಲ್‌ ಗಾಂಧಿ ಯಾವಾಗ ಬರ್ತಾರೆ ಅನ್ನೋದೇ ನಿಶ್ಚಯವಾಗಿಲ್ಲ.