BSY-ಸಂತೋಷ್ ಭೇಟಿ: ಹೈಕಮಾಂಡ್ ಏನಾದ್ರೂ ಸಂದೇಶ ರವಾನಿಸಿದ್ಯಾ..?

Dec 16, 2019, 5:36 PM IST

ಬೆಂಗಳೂರು, (ಡಿ.16): ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಹೊಸ್ತಿಲಲ್ಲಿರುವಾಗಲೇ ಬಿಜೆಪಿಯ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.  ಸೋಮವಾರ ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ ಬಿಎಸ್ ವೈ ಜತೆ ಮಹತ್ವದ ಚರ್ಚೆ ನಡೆಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಸಂತೋಷ್ ಮೊದಲ ಬಾರಿಗೆ ಯಡಿಯೂರಪ್ಪನವರನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೇ ಸಂಪುಟ ವಿಸ್ತರಣೆ ಸಂಬಂಧ ಬಿೆಸ್ ವೈ ಹೈಕಮಾಂಡ್ ಭೇಟಿ ಮಾಡುವ ಮುನ್ನವೇ ಬಿಎಸ್ ಸಂತೋಷ್ ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಹೈಕಮಾಂಡ್ ಏನಾದ್ರೂ ಸಂತೋಷ್ ಮೂಲಕ ಸಂದೇಶ ರವಾನಿಸಿದ್ರಾ..? ಎನ್ನುವ ಪ್ರಶ್ನೆಗಳು ಸಹ ಉದ್ಭವಿಸಿವೆ.