ಕರಾಳ ರಾತ್ರಿಯ ಕಟು ಸತ್ಯ ಬಿಚ್ಚಿಟ್ಟ ಸಿ.ಟಿ ರವಿ! ಡಿಕೆಶಿ, ಹೆಬ್ಬಾಳ್ಕರ್ ಕಡೆ ಕೈ ತೋರಿಸಿದ್ದೇಕೆ ಬಿಜೆಪಿ ಎಂಎಲ್‌ಸಿ?

Dec 22, 2024, 3:17 PM IST

ಬೆಂಗಳೂರು: ಇದು ರೀಲ್ ಸಿನಿಮಾವಲ್ಲ, ರಿಯಲ್ ಸಿನಿಮಾ. ರೀಲ್ ಸಿನಿಮಾವನ್ನು ಮೀರಿಸೋ ರಿಯಲ್ ಹಾರರ್ ಸಿನಿಮಾ. ಒಂದೇ ರಾತ್ರಿ. ಕತ್ತಲು ಕಳೆದು ಬೆಳಕು ಮೂಡುವಷ್ಟರಲ್ಲಿ ನಡೆದದ್ದು ಭಯಾನಕ ಘಟನೆ. ಸ್ಟೇಷನ್'ನಲ್ಲಿರಬೇಕಿದ್ದ ಆರೋಪಿಗೆ ಊರೂರು, ಗಲ್ಲಿಗಲ್ಲಿಗಳಲ್ಲಿ ಅಕ್ಷರಶಃ ನರಕ ದರ್ಶನ. ಈ ಹಾರರ್ ಥ್ರಿಲ್ಲರ್ ಸಿನಿಮಾದ ಡೆರೆಕ್ಟರ್ ಯಾರು..? ಆ ಇಬ್ಬರ ವಿರುದ್ಧವೇ ಸಿ.ಟಿ ರವಿ ಆರೋಪ ಮಾಡಿದ್ಯಾಕೆ..? ಏನದು ಮಧ್ಯರಾತ್ರಿ ಮಸಲತ್ತಿನ ಹಿಂದಿನ  ಅಸಲಿ ಕಹಾನಿ..? ಆ ಇಂಟ್ರೆಸ್ಟಿಂಗ್ ಸ್ಟೋರಿಯ ಇಂಚಿಂಚೂ ಕಥೆಯನ್ನ ತೋರಿಸ್ತೀವಿ ನೋಡಿ.

ತಮ್ಮ ವಿರುದ್ಧದ ಅತಿರೇಕದ ಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರತ್ತ ಕೈ ತೋರಿಸ್ತಾ ಇದ್ದಾರೆ ಬಿಜೆಪಿ ಎಂ.ಎಲ್.ಸಿ ಸಿ.ಟಿ ರವಿ. ಹಾಗಾದ್ರೆ ತಮ್ಮ ವಿರುದ್ಧದ ಆರೋಪದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?