ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ, ಕಿಡಿ ಹತ್ತಿಸಿದೆ ಯತ್ನಾಳ್ ಹೇಳಿಕೆ

Jan 10, 2021, 11:47 AM IST

ಬೆಂಗಳೂರು (ಜ. 10): ಯಾವಾಗಲೂ ವಿವಾದಾತ್ಮ ಹೇಳಿಕೆ ಕೊಡುವ ಯತ್ನಾಳ್ ಮತ್ತೆ ಅದನ್ನೇ ಮುಂದುವರೆಸಿದ್ದಾರೆ. ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ. ಆಗ ನನ್ನ ಪಾತ್ರ ಏನೆಂದು ಗೊತ್ತಾಗುತ್ತದೆ. ಮುಂದೇನಾಗುತ್ತದೆ..? ನೀವೇ ನೋಡಿ ಎಂದು ಯತ್ನಾಳ್ ಹೇಳಿದ್ದಾರೆ. 

ಸಂಕ್ರಾಂತಿಗೆ ಸಿಹಿ ಸುದ್ದಿ, ಕೋವಿಡ್ ಲಸಿಕೆ ವಿತರಣೆ ದಿನಾಂಕ ಘೋಷಿಸಿದ ಮೋದಿ

ಇನ್ನು ಯುವರಾಜನ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನನಗೆ ಯುವರಾಜನ ಪರಿಚಯ ಇಲ್ಲ. ಬೆಂಗಳೂರು, ದೆಹಲಿಯಲ್ಲಿ ಯುವರಾಜ್‌ನಂತೆ ಕೆಲಸ ಮಾಡುವ ಏಜೆಂಟ್‌ಗಳಿದ್ದಾರೆ. ಡ್ರಗ್, ಪರಿಷತ್ ಗಲಾಟೆ ಕೇಸ್‌ಗಳಂತೆ ಈ ಕೇಸನ್ನೂ ಮುಚ್ಚಲಾಗುತ್ತದೆ ಎಂದು ಸರ್ಕಾರದ ವಿರುದ್ಧ ಯತ್ನಾಲ್ ಕಿಡಿ ಕಾರಿದ್ದಾರೆ.