ಕಾಂಗ್ರೆಸ್‌ ವಿರುದ್ಧ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಮೈತ್ರಿ ಪಕ್ಷಗಳು; ಹಳೆ ಮೈಸೂರಲ್ಲಿ ಮೈತ್ರಿ ಪಾಲನೆಯೇ ದೊಡ್ಡ ಸವಾಲು

Mar 31, 2024, 12:36 PM IST

ಲೋಕಸಮರಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೇ ರಾಜಕೀಯ ವಿದ್ಯಮಾನಗಳು ದಿನೇ ದಿನೇ ರೋಚಕತೆ ಪಡೀತಾ ಇದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನ ದಾಖಲಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ತಕ್ಕ ಉತ್ತರ ನೀಡೋದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ನಿಂತು ಹೋರಾಡೋಕೆ ಮುಂದಾಗಿದೆ. ಮೈತ್ರಿ ಮಾತುಕಥೆಯಂತೆ ಕ್ಷೇತ್ರಗಳೆಲ್ಲಾ ಫೈನಲ್ ಆಗಿದೆ. ಆದ್ರೆ ಮೈತ್ರಿ ಪಕ್ಷಗಳಿಗೆ ಅನೇಕ ಸವಾಲುಗಳು ಸತತವಾಗಿ ಕಾಡ್ತಾನೇ ಇದೆ. ಹೀಗಾಗಿ ಸಮನ್ವಯ ಸಮಿತಿ ಸಭೆ ಮೂಲಕ ಪರಿಹಾರ ಹುಡುಕಿಕೊಳ್ಳೋಕೆ ದೋಸ್ತಿಗಳು ಮುಂದಾಗಿದ್ದಾರೆ. ಬನ್ನಿ ಹಾಗಾದ್ರೆ ಸಮನ್ವಯ ಸಮಿತಿ ಸಭೆಯ ಉದ್ದೇಶ ಹಾಗೂ ಮುಖ್ಯಾಂಶವೇನು ಅನ್ನೋದನ್ನ ನೋಡೋಣ..

ಎರಡೂ ಪಕ್ಷಗಳ ನಡುವೆ ಹಂಚಿಕೊಳ್ಳಲಾದ ಚುನಾವಣಾ ಜವಾಬ್ದಾರಿಗಳೇನು..? ಸಮನ್ವಯ ಸಭೆ ನೆಪದಲ್ಲಿ ಮೈತ್ರಿ ಪಕ್ಷಗಳು ಗೇಮ್ ಪ್ಲಾನ್ ಕೂಡ ರೂಪಿಸಿಕೊಂಡಿವೆ. ಎಲೆಕ್ಷನ್ನಲ್ಲಿ  ದೊಡ್ಡ ಗೆಲುವೊಂದೇ ಉಭಯ ಪಕ್ಷಗಳ ಗುರಿ. ಇದೊಂದು ಗುರಿ ಸಾಧಿಸೋಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದಿಷ್ಟು ಕೆಲಸಗಳನ್ನ ಹಂಚಿಕೊಂಡಿದ್ದಾವೆ. ಮಂಡ್ಯದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ದಳಪತಿಗಳ ವಿರುದ್ಧ ಸಮರ ಸಾರಿ ರಾಜಕೀಯ ಜೀವನ ಶುರು ಮಾಡಿದ ರೆಬಲ್ ಲೇಡಿ ಇನ್ನೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.